‘ಬೆಂಗಳೂರು ರಕ್ಷಿಸಿ ಪಾದಯಾತ್ರೆ’ ಅಭಿಯಾನದ ಅಂಗವಾಗಿ ಸಿದ್ಧಪಡಿಸಿರುವ ‘ಲೆಕ್ಕಕೊಡಿ ಬೆಂಗಳೂರಿನ ಜನರಿಗೆ’ ‘ಚಾರ್ಜ್ ಶೀಟ್’ಅನ್ನು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಗುರುವಾರ ಬಿಡುಗಡೆ ಮಾಡಿದರು.
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಪಕ್ಷಗಳ ಮಧ್ಯೆ ಕೆಸರೆರಚಾಟ ದಿನೇ ದಿನೆ ಹೆಚ್ಚುತ್ತಲೇ ಇದ್ದು, ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿಯು ‘ಬೆಂಗಳೂರು ರಕ್ಷಿಸಿ ಪಾದಯಾತ್ರೆ’ ಅಭಿಯಾನದ ಅಂಗವಾಗಿ ಸಿದ್ಧಪಡಿಸಿರುವ ‘ಲೆಕ್ಕಕೊಡಿ ಬೆಂಗಳೂರಿನ ಜನರಿಗೆ’ ‘ಚಾರ್ಜ್ ಶೀಟ್’ಅನ್ನು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಗುರುವಾರ ಬಿಡುಗಡೆ ಮಾಡಿದರು.
15 ಪುಟಗಳ ‘ಚಾರ್ಜ್ ಶೀಟ್’ ಬಿಡುಗಡೆ ಮಾಡಿದ ಪ್ರಕಾಶ್ ಜಾವಡೇಕರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಗೂಂಡಾ ರಾಜ್ಯ ಇದೆ. ನಾಯಕರ ಜೇಬು ತುಂಬಿಸುವುದೇ ಕಾಂಗ್ರೆಸ್‌ನ ಧ್ಯೇಯವಾಗಿದೆ ಎಂದು ಆಪಾದಿಸಿದರು.
ಬೆಂಗಳೂರಿನಲ್ಲಿ ಫೆ.2ರಂದು ‘ಬೆಂಗಳೂರು ರಕ್ಷಿಸಿ ಪಾದಯಾತ್ರೆ’ ಅಭಿಯಾನ ಆರಂಭವಾಗಲಿದೆ. ‘ಲೆಕ್ಕಕೊಡಿ ಬೆಂಗಳೂರಿನ ಜನರಿಗೆ’ ಪ್ರತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಪಕ್ಷದ ಮಾಡಲಿದೆ ಎಂದು ಹೇಳಿದರು.
‘ಚಾರ್ಜ್ ಶೀಟ್’ ನಲ್ಲಿ ಪ್ರಸ್ತಾಪಿಸಿರುವ ಅಂಶಗಳು
* ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸರ್ಕಾರ ನಡೆಯುತ್ತಿದೆ. ಈ ಕೂಟಕ್ಕೆ ಸಚಿವ ಕೆ.ಜೆ. ಜಾರ್ಜ್ ಖಜಾಂಚಿ
* ಸ್ವರ್ಗವಾಗಿದ್ದ ಬೆಂಗಳೂರನ್ನು ನರಕ ಮಾಡಿದ ಕಾಂಗ್ರೆಸ್
* ‘ಬೆಂಗಳೂರು ಮಾಸ್ಟರ್ ಪ್ಲಾನ್ 2031’ ಆಗಿದೆ ಕಾಂಗ್ರೆಸ್ ಪಕ್ಷಕ್ಕೆ ಹಗರಣದ ‘ಚೆಕ್ ಲೀಸ್ಟ್’
* ‘ಬೆಂಗಳೂರು ಸಿಟಿ‘ ಆಗಿದೆ ‘ಐಟಿ ಸಿಟಿ’ಯಿಂದ ‘ಕ್ರೈಂ ಸಿಟಿ’
* ಮಹಿಳೆಯರಿಗಿಲ್ಲ ಸುರಕ್ಷತೆ
* ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಉದ್ಯಮಿ ಪುತ್ರ ವಿದ್ವತ್ ಮೇಲೆ ನಡೆಸಿದ ಹಲ್ಲೆಯ ಅಂಶಗಳು ಸೇರಿದಂತೆ ಹಲವು ವಿಷಯಗಳನ್ನು ಇದರಲ್ಲಿ ಮುದ್ರಿಸಲಾಗಿದೆ.
Comments are closed.