ಕರ್ನಾಟಕ

ಬೆಳಗಾವಿ ಪಾಲಿಕೆಗೆ ಕನ್ನಡಿಗ ಬಸಪ್ಪ ಮೇಯರ್ ಆಗಿ ಅವಿರೋಧ ಆಯ್ಕೆ

Pinterest LinkedIn Tumblr

ಬೆಳಗಾವಿ: ಕನ್ನಡಿಗರಿಗೆ ಕಬ್ಬಿಣದ ಕಡಲೆಯಾಗಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ದಶಕದ ಬಳಿಕ ಮತ್ತೆ ಕನ್ನಡಿಗರೊಬ್ಬರು ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ಪ್ರಾಬಲ್ಯ ಹೊಂದಿದ್ದರೂ ಈ ಬಾರಿ ಮೇಯರ್ ಹುದ್ದೆ ಕೈತಪ್ಪಿದೆ. ಇದಕ್ಕೆ ಕಾರಣ ಎಂಇಎಸ್ ನಲ್ಲಿ ಎಸ್ ಟಿ ಮೀಸಲಾತಿ ಹೊಂದಿದ ಸದಸ್ಯರಿಲ್ಲದ ಕಾರಣ ಪರಿಶಿಷ್ಟ ಜಾತಿಗೆ ಮೀಸಲಾದ ಮೇಯರ್ ಹುದ್ದೆಗೆ ಕನ್ನಡಿಗ ಕಾಂಗ್ರೆಸ್ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರು ಆಯ್ಕೆಯಾಗಿದ್ದಾರೆ. ಇನ್ನು 58 ಸದಸ್ಯ ಬಲದ ಪಾಲಿಕೆಯಲ್ಲಿ ಎಂಇಎಸ್ 32 ಸದಸ್ಯ ಬಲ ಹೊಂದಿತ್ತು.

ಚುನಾವಣಾಧಿಕಾರಿ ಮೇಘಣ್ಣನವರ್ ಅವರು ಬಸಪ್ಪ ಚಿಕ್ಕಲದಿನ್ನಿ ಅವರು ಮೇಯರ್ ಆಗಿ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಘೋಷಿಸಿದರು. ಬಸಪ್ಪ ಚಿಕ್ಕಲದಿನ್ನಿ ಅವರು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೋಳಿ ಅವರು ಆಪ್ತರಾಗಿದ್ದು 5ನೇ ಕನ್ನಡಿಗ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕನ್ನಡಿಗರೊಬ್ಬರು ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿರುವುದಕ್ಕೆ ಕನ್ನಡಿಗ ಸದಸ್ಯರು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

Comments are closed.