ಕರ್ನಾಟಕ

ಯಡಿಯೂರಪ್ಪ ಪಿಎ ಸಂತೋಷ್‌ ಗೂಂಡಾ ಅಲ್ವಾ?: ರೆಡ್ಡಿ ಪ್ರಶ್ನೆ

Pinterest LinkedIn Tumblr


ಬೆಂಗಳೂರು: ‘ವಿನಯ್‌ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪಿಎ ಸಂತೋಷ್‌ ಗೂಂಡಾ ಅಲ್ವಾ?’ಇದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ನಾಯಕರಿಗೆ ಕೇಳಿದ ಪ್ರಶ್ನೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ರೆಡ್ಡಿ ‘ಬಿಜೆಪಿಯವರು ರಾಜಕೀಯ ಲಾಭಕ್ಕೆ ಆರೋಪ ಮಾಡುತ್ತಿದ್ದು, ಮಹಮದ್‌ ನಲಪಾಡ್‌ ಹ್ಯಾರಿಸ್‌ ಹಲ್ಲೆ ಪ್ರಕರಣದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ.ಯಾವುದೇ ಹಸ್ತಕ್ಷೇಪ ನಡೆಸಿಲ್ಲ’ ಎಂದರು.

‘ಈಶ್ವರಪ್ಪ ಪಿಎ ವಿನಯ್‌ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬಿ.ಎಸ್‌.ಯಡಿಯೂರಪ್ಪ ಪಿಎ ಸಂತೋಷ್‌ ಗೂಂಡಾ ಅಲ್ವಾ? ಧನ್ಯಶ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ಮುಖಂಡ ಗೂಂಡಾ ಅಲ್ವಾ ?’ ಎಂದು ಪ್ರಶ್ನಿಸಿದರು.

ಬೆಂಗಳೂರನ್ನು ಗೂಂಡಾಗಿರಿಯಿಂದ ರಕ್ಷಿಸಬೇಕು ಹೋರಾಟ ಆರಂಭಿಸಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿ ‘ಬೆಂಗಳೂರನ್ನು ಮುಳುಗಿಸಿದ್ದೇ ಬಿಜೆಪಿ. ಅವರಿಂದ ಪಾಠ ಹೇಳಿಕೊಳ್ಳಬೇಕಾಗಿಲ್ಲ’ ಎಂದು ಕಿಡಿ ಕಾರಿದರು.

-ಉದಯವಾಣಿ

Comments are closed.