ಮಂಡ್ಯ : ನಮ್ಮ ಜಾತಕವನ್ನು ಬಿಚ್ಚಿಡುವುದಾಗಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ನಮ್ಮವು ಒಂದೆರಡಿದ್ದರೆ, ಅವರ ಬಂಡವಾಳ ನಮ್ಮಲ್ಲಿ ಸಾವಿರಗಟ್ಟಲೆ ಇವೆ. ನಾವೂ ಒಂದೊಂದೇ ಎಪಿಸೋಡ್ ಬಿಚ್ಚಿಡಬೇಕಾಗುತ್ತದೆ ಎಂದು ಜೆಡಿಎಸ್ ಬಂಡಾಯ ಶಾಸಕರ ಗುಂಪಿನ ನಾಯಕ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಶ್ರೀ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಕೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಚುನಾವಣೆ ಬಂದಾಗೆಲ್ಲಾ ಕಣ್ಣೀರು ಸುರಿಸುತ್ತಾ ಜಾತಿ ಹೆಸರಲ್ಲಿ ರಾಜಕಾರಣ ಮಾಡುವ ದೇವೇಗೌಡರು ಅದ್ಯಾವ ಬೆಳೆಸಿ, ಅತ್ಯುನ್ನತ ಹುದ್ದೆಗೇರಿಸಿದ್ದಾರೆ ಎಂದು ಪ್ರಶ್ನಿಸಿದರು.
Comments are closed.