ಕರ್ನಾಟಕ

ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೋಲೀಸರ ಮೇಲೆಯೇ ಗೂಂಡಾಗಳಿಂದ ಹಲ್ಲೆ, ನಾಲ್ವರ ಬಂಧನ ! ಇಲ್ಲಿದೆ ವೀಡಿಯೊ

Pinterest LinkedIn Tumblr

ಬೆಂಗಳೂರು: ಹಾಡ ಹಗಲೇ ಪೋಲೀಸರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವರ್ತೂರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಪೋಳೀಸ್ ಪೇದೆಗಳ ಮೇಲೆ ಗೂಡಾಗಳು ಹಲ್ಲೆ ನಡೆಸಿದ್ದಾರೆ.

ಸಿದ್ದಾಪುರ ಕ್ರಾಸ್ ಬಳಿ ಪೋಲೀಸ್ ಪೇದೆಗಲಾದ ಬಸಪ್ಪ ಗಾಣೆಗಾರ, ಶರಣಬಸಪ್ಪ ಎನ್ನುವವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಇಸ್ಪೀಟ್ ಆಟ ಆಡುತ್ತಿದ್ದ ಅಡ್ಡೆಗಳ ಮೇಲೆ ಪೋಲೀಸ್ ಪೇದೆಗಳು ದಾಳಿ ನಡೆಸಿದ್ದು ಈ ವೇಳೆ ದುಷ್ಕರ್ಮಿಗಳು ಪೇದೆಗಳ ಮೇಲೆ ಕೈ ಮಾಡಿದ್ದಾರೆ. ಸಾರ್ವಜನಿಕರ ಮುಂದೆಯೇ ಅವರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.

ಹೀಗೆ ಪೋಲೀಸ್ ಪೇದೆಗಳ ಮೇಲೆ ನಡೆದ ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಾಲ್ವರ ಬಂಧನ
ಪೋಲೀಸ್ ಪೇದೆಗಳ ಮೇಲಿನ ಹಲ್ಲೆ ಪ್ರಕರಣವು ಮಾದ್ಯಮಗಳಲ್ಲಿ ವರದಿಯಾಗುತ್ತಲೇ ಕಾರ್ಯಪ್ರವೃತ್ತರಾದ ಪೋಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದಾರೆ. ಕುಮಾರ್, ಸಂದೀಪ್, ಮೂರ್ತಿ ಹಾಗೂ ಮುರಳಿ ಮೋಹನ್ ಎನ್ನುವವರನ್ನು ವರ್ತೂರು ಪೋಲೀಸರು ಬಂಧಿಸಿದ್ದಾರೆ.

ದಾಳಿ ಖಂಡನೀಯ
ಪೋಲೀಸರ ಮೇಲೆ ಹಲ್ಲೆ ಖಂಡನೀಯ. ಕಾನೂನು ಸುವ್ಯವಸ್ಥೆ ಪಾಲನೆ ಮಾಡಲು ತೆರಳಿದ ಪೋಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದವರು ಯಾರೇ ಆಗಿರಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Comments are closed.