ಶಿವಮೊಗ್ಗ: ನಿಧಿಯಾಸೆಗಾಗಿ ನರಬಲಿ ನಿಡಿದ್ದ ನಾಲ್ವರನ್ನು ಶಿಕಾರಿಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇಶ್ಯನಾಯ್ಕ್(65) ನಿಧಿಯಾಸೆಗೆ ಬಲಿಯಾದ ವ್ಯಕ್ತಿ. ಮಾರ್ಚ್ 7ರಂದು ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ನಿಧಿ ಸಿಕ್ಕುತ್ತದೆ ಎನ್ನುವ ಕಾರಣದಿಂಡ ನಾಲ್ವರು ಆರೋಪಿಗಳಾದ ರಂಗಪ್ಪ, ಶೇಖರಪ್ಪ, ಮಂಜುನಾಥ ಹಾಗೂ ಗೌಸ್ ಪೀರ್ ಸೇರಿ ಕೇಶ್ಯನಾಯ್ಕ್ ಹತ್ಯೆ ಮಾಡಿದ್ದರು.
ಆರೋಪಿಗಳು ಕೇಶ್ಯನಾಯ್ಕ್ ಅವರ ರುಂಡ, ಕೈ, ಕಾಲು ಎಲ್ಲವನ್ನೂ ಬೇರ್ಪಡಿಸುವ ಮುಖೇನ ದಾರುಣವಾಗಿ ಕೊಲೆ ಮಾಡಿದ್ದರು. ಹೊಳೆ ದಂಡೆಯಲ್ಲಿ ಇರುವ ಹೊನ್ನೇಮರ ಚೌಡಮ್ಮ ದೇವಾಲಯದ ಬಳಿ ನಿಧಿ ಇದೆ, ನರಬಲಿ ನೀಡಿದ್ದಾದರೆ ನಿಧಿಯು ನಮಗೆ ದೊರೆಯಲಿದೆ ಎಂದು ನಂಬಿದ್ದ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ.
ನಿಧಿಗಾಗಿ ನರಬಲಿ ನಿಡಿದ್ದ ಪ್ರಕರಣ ಜಿಲ್ಲೆಯಾದ್ಯಂತ ಬಾರೀ ಕಳವಳ ಮೂಡಿಸಿತ್ತು. ಪ್ರಕರಣದ ಬೆನ್ನತ್ತಿ ತನಿಖೆ ನಡೆಸಿದ್ದ ಶಿಕಾರಿಪುರ ಗ್ರಾಮಾಂತರ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ..
Comments are closed.