ತುಮಕೂರು: ಸಿದ್ಧಗಂಗೆಯ ಸಿದ್ಧಿ ಪುರುಷ ಡಾ.ಶ್ರೀ ಶಿವಕುಮಾರ ಸ್ವಾಮಿಗಳ 111ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಭಾನುವಾರ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.
ನಾಡಿನ ವಿವಿಧೆಡೆಯಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಶ್ರೀ ಮಠ ದಲ್ಲಿ ಶ್ರೀಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ವಿಶೇಷ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಾವಿರಾರು ಜನ ಬೆಳಗ್ಗಿನ ತಿಂಡಿ ಮತ್ತು ಅನ್ನಪ್ರಸಾದವನ್ನು ಸೇವಿಸುತ್ತಿದ್ದಾರೆ.
ಬೆಳಗ್ಗೆ 5 ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಳೆಯ ಮಠದಲ್ಲಿ ಬೆಳಗಿನ ಜಾವ 4 ಗಂಟೆಗೆ ಶಿವಪೂಜೆ ಮುಗಿಸಿಕೊಂಡು ಹೊರ ಬಂದ ಶ್ರೀಗಳಿಗೆ ವಿವಿಧ ಮಂಗಳವಾದ್ಯ ಹಾಗೂ 111 ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಮಠದ ಆವರಣದಲ್ಲಿ ನಿರ್ಮಿಸಿರುವ ವೇದಿಕೆಗೆ ಕರೆ ತರಲಾಯಿತು.
ನಾಡಿನ ವಿವಿಧೆಡೆಯಿಂದ ಆಗಮಿಸಿರುವ ನೂರಾರು ಮಠಗಳ ಮಠಾಧೀಶರು ಪುಷ್ಪಾರ್ಚನೆ ಮೂಲಕ ಸ್ವಾಮೀಜಿ ಹುಟ್ಟುಹಬ್ಬ ದ ಆಶೀರ್ವಾದ ಪಡೆದರು.
ಬಿಜೆಪಿ ಯಡಿಯೂರಪ್ಪ ಸೇರಿದಂತಎ ವಿವಿಧ ರಾಜಕೀಯ, ಸಿನಿ ರಂಗದ ಗಣ್ಯರು ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸವಿರುವುದರಿಂದ ಸಾಮೂಹಿಕ ಪಾದಪೂಜೆಗೆ ಅವಕಾಶ ನೀಡಲಾಗಿಲ್ಲ. ಆದರೆ ಬರುವ ಭಕ್ತರಿಗೆಲ್ಲ ಶ್ರೀಗಳ ದರ್ಶನ ಆಶೀರ್ವಾದ ನೀಡಲಾಗುತ್ತಿದೆ.
Comments are closed.