ಕರ್ನಾಟಕ

ಹಾಲಪ್ಪ ಕೇಸ್‌ ಖುಲಾಸೆ ಆಗಿದೆ: ಕೈ ಹಿಡಿಯಲು ಸಿಎಂ ಗ್ರೀನ್‌ ಸಿಗ್ನಲ್‌

Pinterest LinkedIn Tumblr


ಮೈಸೂರು: ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಕಾಂಗ್ರೆಸ್‌ಗೆ ಮರಳುವ ಬಗ್ಗೆ ಯತ್ನ ಆರಂಭಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ ಜೊತೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.

ಭಾನುವಾರ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗ ‘ಹಾಲಪ್ಪ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ನಮ್ಮ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ನಾನು ಆ ಕುರಿತು ಹೈಕಮಾಂಡ್‌ ಜೊತೆ ಮಾತನಾಡುತ್ತೇನೆ’ ಎಂದರು.

‘ಹಾಲಪ್ಪ ಅವರ ಮೇಲಿದ್ದ ಕ್ರಿಮಿನಲ್‌ ಕೇಸ್‌ ಖುಲಾಸೆ ಆಗಿದೆ.ಅವರೀಗ ಆರೋಪ ಮುಕ್ತರಾಗಿದ್ದಾರೆ. ಅವರು ಹಿಂದುಳಿದ ವರ್ಗದ ನಾಯಕ . ಸಿದ್ಧಾಂತ ಹೊಂದಾಣಿಕೆ ಆಗುತ್ತದೆ. ಪಕ್ಷ ಸೇರ್ಪಡೆಯಾಗಲು ಅಡ್ಡಿ ಇಲ್ಲ ,ಒಂದೇ ಸಿದ್ಧಾಂತ ನಂಬಿ ಬರುವವರಿಗೆ ಪಕ್ಷಕ್ಕೆ ಸ್ವಾಗತವಿದೆ’ ಎಂದರು.

750 ಕೆಜಿ ಸೇಬಿನ ಹಾರ !

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಹೂಟಗಳ್ಳಿಯಲ್ಲಿ ಅಭಿಮಾನಿಗಳ ಸಂಘದ ಅಧ್ಯಕ್ಷ ದೇಶಿ ಗೌಡ ಅವರು 750 ಕೆಜಿ ತೂಕದ ಬೃಹತ್‌ ಸೇಬುಗಳ ಹಾರ ಹಾಕಿ ಸ್ವಾಗತಿಸಿದರು. ಹಾರ ಹಾಕಿದ ಬಳಿಕ ಅಲ್ಲಿದ್ದ ಕೈ ಕಾರ್ಯಕರ್ತರು ಮುಗಿ ಬಿದ್ದು ಸೇಬುಗಳನ್ನು ಕಿತ್ತುಕೊಂಡರು.

ಸಿಎಂ ಸಿದ್ದರಾಮಯ್ಯ ಹಿಂದೆ ಹಲವು ಭಾಷಣಗಳಲ್ಲಿ ಹಾಲಪ್ಪ ಪ್ರಕರಣವನ್ನು ಉಲ್ಲೇಖ ಮಾಡಿ ಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು.

-ಉದಯವಾಣಿ

Comments are closed.