ಮೈಸೂರು: ಐದು ವರ್ಷದಿಂದ ಜನಪರವಾದ ಆಡಳಿತ ನೀಡಿರುವ ಕಾರಣ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನೇ ಮುಂದಿನ ಮುಖ್ಯಮಂತ್ರಿಯಾಗಿಯೂ ಇರುತ್ತೇನೆ. ನನ್ನ ರಾಜಕೀಯದ ಕೊನೆಯ ಚುನಾವಣೆಯಲ್ಲಿ ಆಶೀರ್ವಾದಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಭಾನುವಾರ ಮೂರನೇ ದಿನದ ಚುನಾವಣಾ ಪ್ರಚಾರ ನಡಸಿದ ಸಂದರ್ಭದಲ್ಲಿ ಸಂತೆಮಾಳದ ಬಳಿ ಜನರನ್ನುದ್ದುಶಿಸಿ ಮಾತನಾಡಿ, 2006ರಲ್ಲಿ ನಡೆದ ಜಿದ್ದಾಜಿದ್ದಿಯ ಉಪ ಚುನಾವಣೆಯಲ್ಲಿ ಮತದಾರರು ನನ್ನ ಕೈಬಿಡಲಿಲ್ಲ. ಅಂದು ನನ್ನನ್ನು ಸೋಲಿಸಲು ಜೆಡಿಎಸ್-ಬಿಜೆಪಿ ಒಂದಾದರೂ ಜನರು ಕೈಬಿಡದ ಕಾರಣ ನಾನು ಗೆದ್ದಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಜಕೀಯ ಪ್ರಾರಂಭಿಸಿದ್ದೆ. ಈಗ ಅದೇ ಕ್ಷೇತ್ರದಿಂದ ನನ್ನ ಕೊನೆಯ ಚುನಾವಣೆಯಾಗಿದೆ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರುವುದು ಹಗಲುಕನಸು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಮತ್ತೆ ನಾನೇ ಸಿಎಂ ಆಗಿಯೇ ಇರುತ್ತೇನೆಂದು ವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುತ್ತಿದ್ದೇನೆ. 2008 ಮತ್ತು 2013ರಲ್ಲಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಕ್ಕಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಳು ಬಾರಿ ಸ್ಪರ್ಧಿಸಿ ಐದು ಬಾರಿ ಗೆದ್ದು, 2ಬಾರಿ ಸೋತಿದ್ದೇನೆ. ಜನರ ಆಶೀರ್ವಾದದಿಂದ ಗೆದ್ದು ಸಿಎಂ ಆಗುವ ಸಿಕ್ಕಿದ್ದರಿಂದ ಎಲ್ಲ ರೀತಿಯ ಅಭಿವೃದ್ಧಿ ಮಾಡಿದ್ದೇನೆ ಎಂದರು.
Comments are closed.