ಬೆಂಗಳೂರು: ಏರ್ ಇಂಡಿಯಾ ಮಾಡಿರುವ ಯಡವಟ್ಟಿನಿಂದಾಗಿ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಹಲವಾರು ಕನ್ನಡಿಗರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಚೀನಾದ ಶಾಂಘೈಗೆ ಹೋಗಿದ್ದ ಕನ್ನಡಿಗರು ವಿಮಾನ ಸಿಗದೆ, ಏರ್ಪೋರ್ಟ್ಅಧಿಕಾರಿಗಳಿಂದಲೂ ಯಾವುದೇ ಮಾಹಿತಿ ಸಿಗದೆ ಪರದಾಡುತ್ತಿದ್ದಾರೆ.
ಪ್ರಯಾಣಿಕ ಹರಿ ಶ್ರೀವತ್ಸ ಎಂಬವರು ವಿಡಿಯೋ ಮೂಲಕ, ಕಳೆದ ರಾತ್ರಿ 10 ಗಂಟೆಗೆ ಹೊರಡಬೇಕಿದ್ದ ವಿಮಾನ ಕ್ಯಾನ್ಸಲ್ ಆಗಿದೆ. ಈ ಕುರಿತು ಏರ್ ಇಂಡಿ ಯಾದವರು ಯಾವುದೇ ಮಾಹಿತಿ ನೀಡಿಲ್ಲ. ಪರ್ಯಾಯ ವ್ಯವಸ್ಥೆಗಾಗಿ ಸಂಪರ್ಕಿಸಿದರೆ, ಸಿಬ್ಬಂದಿ ಸಿಗುತ್ತಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ನಾವು ಇರುವಂತಹ ವಿಮಾನ ನಿಲ್ದಾಣದಲ್ಲಿಯೂ ಯಾವುದೇ ರೀತಿಯ ಸಹಕಾರ ಸಿಗುತ್ತಿಲ್ಲ. ನಾವು ಭಾರತಕ್ಕೆ ಬರುತ್ತೇವೋ ಇಲ್ಲವೋ ಎನ್ನುವುದೇ ಸಂದೇಹವಿದೆ. ಶೌಚಾಲಯ ಬಳಸಲು ಅವಕಾಶವಿಲ್ಲ. ಧರಣಿ ಮಾಡಿದವರನ್ನು ನಿಲ್ದಾಣದಿಂದ ಹೊರ ಹಾಕಿದ್ದಾರೆ. ಏರ್ ಇಂಡಿಯಾದ ಯಡವಟ್ಟಿಗೆ ಕನ್ನಡಿಗರಷ್ಟೇ ಮಾತ್ರವಲ್ಲದೇ, 300ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಅತಂತ್ರ ವಾಗಿದೆ.
Comments are closed.