ಕರ್ನಾಟಕ

ನೀತಿ ಸಂಹಿತೆ ಜಾರಿ: ಸಚಿವರ ಭಾವಚಿತ್ರವೂ ಮೂಲೆಗುಂಪು

Pinterest LinkedIn Tumblr


ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯೊಂದಿಗೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸರಕಾರದ ವಿವಿಧ ಇಲಾಖೆಗಳ ವೆಬ್ ಸೈಟಿನಲ್ಲಿರುವ ಸಚಿವರ ಭಾವಚಿತ್ರ ತೆಗೆದು ಹಾಕಲು ಸರಕಾರ ಆದೇಶಿ ಸಿದೆ.

ಮೇ 12 ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಲಾಖೆಯ ಅಧೀನ ಕಚೇರಿ, ನಿಗಮ ಮಂಡಳಿ, ಸ್ವಾಯತ್ತ ಸಂಸ್ಥೆಗಳು ಹಾಗೂ ವೆಬ್ಸೈಟ್ನಲ್ಲಿರುವ ಸಚಿವರ, ಶಾಸಕರ, ಭಾವಚಿತ್ರ ಗಳನ್ನು ತೆಗೆದು ಹಾಕಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕೇಂದ್ರ ಚುನಾವಣಾ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳುವಂತೆ 38 ಇಲಾಖೆಗಳ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Comments are closed.