ಕರ್ನಾಟಕ

ಸಾಮಾಜಿಕ ಮಾಧ್ಯಮದಲ್ಲಿ ಗುಪ್ತದಳ ವರದಿ ಪ್ರತಿ ನಕಲಿ: ಅಧಿಕಾರಿಗಳ ಸ್ಪಷ್ಟನೆ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿಯ ಸ್ಪರ್ಧೆಗೆ ಸಂಬಂಧಿಸಿದಂತೆ ರಾಜ್ಯ ಗುಪ್ತಚರ ಇಲಾಖೆ ನೀಡಿರುವ ವರದಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪ್ರತಿ ನಕಲಿ ಎಂಬುದಾಗಿ ಸಿಎಂ ಮಾಧ್ಯಮ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೆ ಚಾಮುಂಡೇಶ್ವರಿ ಕ್ಷೇತ್ರ ಸುರಕ್ಷಿತವಲ್ಲ, ಬೇರೆ ಪರ್ಯಾಯ ಕ್ಷೇತ್ರಗಳು ಇವೆ ಎಂಬುದಾಗಿ ರಾಜ್ಯ ಗುಪ್ತಚರ ಇಲಾಖೆ ನೀಡಿರುವ ವರದಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವರದಿಯ ಪ್ರತಿ ಹರಿದಾಡುತ್ತಿದೆ. ಆದರೆ ಅದು ನಕಲಿ ಪ್ರತಿ ಎಂಬುದಾಗಿ ಸಿಎಂ ಮಾಧ್ಯಮ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಂತಹ ಯಾವುದೇ ವರದಿಯನ್ನು ಗುಪ್ತಚರ ವಿಭಾಗ ಕೊಟ್ಟಿಲ್ಲ. ಈ ವರದಿ ನಕಲಿ. ಗುಪ್ತದಳ ವಿಭಾಗದಲ್ಲಿ ಈಗ ಎಡಿಜಿಪಿ ಇಲ್ಲ. ಜತೆಗೆ ಗುಪ್ತದಳದ ವರದಿ ಕನ್ನಡದಲ್ಲಿರುತ್ತದೆ. ಈ ನಕಲಿ ವರದಿ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲ್ಲಬಹುದು ಎಂಬುದನ್ನು ತಿಳಿಯಲು ಗುಪ್ತದಳದಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿ, ವರದಿಯ ಪ್ರತಿ ಬಹಿರಂಗವಾಗಿದೆ ಎಂದು ಹುಬ್ಬಳ್ಳಿಯಲ್ಲಿ ತೋರಿಸಿದ್ದರು.

Comments are closed.