ಬೆಂಗಳೂರು: ಚುನಾವಣಾ ರಣಕಣ ದಲ್ಲಿ ದಿನಕ್ಕೊಂದರಂತೆ ರಾಜಕೀಯ ವಿದ್ಯಮಾನಗಳು ನಡೆಯುತ್ತಿದ್ದು ಶುಕ್ರವಾರ ಬಹುಭಾಷಾ ನಟ ಪ್ರಕಾಶ್ ರೈ ಅವರು ತೆಲಂಗಾಣ ಮುಖ್ಯಮಂತ್ರಿ, ಟಿಆರ್‌ಎಸ್ ನಾಯಕ ಚಂದ್ರಶೇಖರ್ ರಾವ್ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸದಾ ಬಿಜೆಪಿ,ಸಂಘಪರಿವಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರುತ್ತಿರುವ ಪ್ರಕಾಶ್ ರೈ ಅವರು ಈ ಬಾರಿ ಬಿಜೆಪಿಗೆ ಮತ ಹಾಕಬೇಡಿ , ಬೇರೆ ಪಕ್ಷಗಳಿಗೆ ಹಾಕಿ ಎಂದಿದ್ದರು. ಇದೀಗ ಈ ಭೇಟಿ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ತೃತೀಯ ರಂಗಕ್ಕೆ ಬಲ ನೀಡಲು ಯತ್ನ ಮಾಡುತ್ತಿರುವ ದೇವೇಗೌಡ ಅವರು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರ ಮೂಲಕ ತೆಲುಗು ಭಾಷಿಕರ ಮತಗಳನ್ನು ಜೆಡಿಎಸ್‌ಗೆ ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
-ಉದಯವಾಣಿ
Comments are closed.