ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಯ ಅಭ್ಯರ್ಥಿಗಳ 3 ನೇ ಪಟ್ಟಿ ಬಿಡುಗಡೆಯಾಗಿದ್ದು, ಕೃಷ್ಣರಾಜ, ವಿರಾಜಪೇಟೆ ಸೇರಿದಂತೆ ಕುತೂಹಲ ಮೂಡಿಸಿದ್ದ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ.
ನಿರೀಕ್ಷೆಯಂತೆಯೇ ಹರಪನಹಳ್ಳಿಯಿಂದ ಮಾಜಿ ಸಚಿವ, ರೆಡ್ಡಿ ಸಹೋದರ, ಕರುಣಾಕರ ರೆಡ್ಡಿ, ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಸ್ಎ ರಾಮ್ ದಾಸ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬೋಪಯ್ಯ ಅವರಿಗೆ ಟಿಕೆಟ್ ನೀಡಲಾಗಿದ್ದು ಒಟ್ಟು 59 ಮಂದಿಗೆ ಬಿಜೆಪಿ ಟಿಕೆಟ್ ನೀಡಿದೆ.
ಕೋಲಾರ ಕ್ಷೇತ್ರದಲ್ಲಿ ಬದಲಾವಣೆ ಮಾಡಲಾಗಿದ್ದು, ಎಸ್. ಅಶ್ವಿನಿ ಅವರಿಗೆ ಟಿಕೆಟ್ ನೀಡಲಾಗಿದೆ. ಬದಲಾವಣೆ ಮಾಡಿರುವ ಕ್ಷೇತ್ರ ಸೇರಿದಂತೆ ಮೂರನೇ ಪಟ್ಟಿಯಲ್ಲಿ 60 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.
* ಚಾಮುಂಡೇಶ್ವರಿಯಲ್ಲಿ ಗೋಪಾಲ್ ರಾವ್ ಅವರಿಗೆ ನೀಡಲಾಗಿದೆ.
* ಹುಣಸೂರು ಕ್ಷೇತ್ರಕ್ಕೆ ರಮೇಶ್ ಕುಮಾರ್‌ಗೆ ನೀಡಲಾಗಿದೆ.
* ಕೂಡ್ಲಿಗಿ ಕ್ಷೇತ್ರಕ್ಕೆ ಪಕ್ಷಕ್ಕೆ ಹೊಸದಾಗಿ ಬಂದ ಎನ್.ವೈ. ಗೋಪಾಲಕೃಷ್ಣ ಅವರಿಗೆ ನೀಡಲಾಗಿದೆ.
* ಅರಸೀಕರೆ ಕ್ಷೇತ್ರಕ್ಕೆ ವಿ. ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣಗೆ ಟಿಕೆಟ್ ನೀಡಲಾಗಿದೆ.
* ಹರಪನಹಳ್ಳಿ ಕ್ಷೇತ್ರದಲ್ಲಿ ಕರುಣಾಕರ ರೆಡ್ಡಿಗೆ ನೀಡಲಾಗಿದೆ.
* ಹರಿಹರ ಕ್ಷೇತ್ರಕ್ಕೆ ಬಿ.ಪಿ. ಹರೀಶ್, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಯಶವಂತರಾವ್ ಜಾಧವ್‌ಗೆ ನೀಡಲಾಗಿದೆ.
* ಮೊದಲೆರೆಡು ಪಟ್ಟಿಯಲ್ಲಿ ಕಾಣಿಸಿಕೊಳ್ಳದ ಕೆ.ಜಿ. ಭೋಪಯ್ಯ ಅವರ ಹೆಸರನ್ನು ವಿರಾಜಪೇಟೆ ಕ್ಷೇತ್ರಕ್ಕೆ ಅಂತಿಮಗೊಳಿಸಲಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಿ ಫಾರಂ ಹಿಡಿದು ಕೆಲವರು ಒಳ್ಳೆ ದಿನಕ್ಕಾಗಿ ಕಾಯುತ್ತಿದ್ದರೆ, ಮತ್ತೆ ಕೆಲವರು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ಟಿಕೆಟ್ ಘೊಷಣೆಗಾಗಿ ಕಾಯುತ್ತಿದ್ದ ಆಕಾಂಕ್ಷಿಗಳು ಬಿ ಫಾರಂ ಪಡೆದು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ ಎರಡನೇ ಪಟ್ಟಿಯಲ್ಲಿ 82 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಮೂರನೇ ಪಟ್ಟಿ ಬಿಡುಗಡೆ ಮಡಿದ ಬಳಿಕವೂ ಇನ್ನೂ 11 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ.
Comments are closed.