ರಾಯಚೂರು: ಎರಡು ಬಾರಿ ಶಾಸಕರಾಗಿ ಏನು ಮಾಡಿದ್ದೀರಾ? ಏಕೆ ಬಂದಿದ್ದೀರಾ? ನಿಮ್ಮನ್ನು ಭೇಟಿ ಮಾಡಲು ಬಂದರೆ ನಿಮ್ಮ ಪಿಎ ಹೊರಗೆ ಕಳಿಸುತ್ತಾರೆ ಎಂದು ಮತ ಕೇಳಲು ಹೋದ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಲಿಂಗಸುಗೂರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮತ್ನಾಳದಲ್ಲಿ ಪ್ರಚಾರಕ್ಕೆ ಹೋದಾಗ ಯಾವುದೇ ಅಭಿವೃದ್ಧಿ ಮಾಡಿಲ್ಲ. ಈ ಬಾರಿ ನಿನ್ನ ಸೋಲು ಖಚಿತ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಗ್ರಾಮಸ್ಥರು, ಮಾನಪ್ಪ ವಜ್ಜಲ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದಾಗ, ಮಾನಪ್ಪ ವಜ್ಜಲ ತಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.
Comments are closed.