ಕರ್ನಾಟಕ

ಶಾ -ಕುಮಾರಸ್ವಾಮಿ ಒಂದಾಗಿದ್ದಾರೆ, ದಾಖಲೆ ಬಿಡುಗಡೆ ಮಾಡುತ್ತೇನೆ: ಸಿಎಂ

Pinterest LinkedIn Tumblr


ಬೆಳಗಾವಿ: ‘ಜೆಡಿಎಸ್‌ ಬಿಜೆಪಿಯ ಬಿ ಟೀಂ. ಮುಂದಿನ ದಿನಗಳಲ್ಲಿ ಮರು ಮೈತ್ರಿಗೆ ಮುಂದಾಗಿದ್ದು ಅಮಿತ್‌ ಶಾ ಮತ್ತು ಕುಮಾರಸ್ವಾಮಿ ಅವರು ಒಟ್ಟಿಗೆ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ . ಸಂದರ್ಭ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೊಸ ಬಾಂಬ್‌ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಅಮಿತ್‌ ಶಾ ಅವರ ಮಾತಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ’ ಎಂದೂ ಹೇಳಿದರು.

‘ಯಡಿಯೂರಪ್ಪ ಅವರಿಗೆ ವಯಸ್ಸು 75 ಆದರೂ ಸಂಸದೀಯ ಭಾಷೆ ತಿಳಿದಿಲ್ಲ. ನನ್ನ ವಿರುದ್ದ ಏಕ ವಚನದಲ್ಲಿ ಮಾತನಾಡುತ್ತಾರೆ. ಅವರಿಗಿಂತ ಒಳ್ಳೆಯ ಭಾಷೆ ನನಗೆ ಬರುತ್ತದೆ. ಆದರೆ ಅದು ನನ್ನ ಸಂಸ್ಕೃತಿ ಅಲ್ಲ’ಎಂದರು.

‘ಸಿಎಂ ಆಗಿದ್ದಾಗಲೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಈಗ ಮತ್ತೆ ರೆಡ್ಡಿ ಸಹೋದರರ ಜೊತೆ ಸಖ್ಯ ಬೆಳೆಸಿದ್ದಾರೆ’ ಎಂದು ಕಿಡಿ ಕಾರಿದರು.

‘ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ನನ್ನ ವಿರುದ್ಧ ದಾಖಲೆಗಳಿದ್ದರೆ ಎಸಿಬಿಗೋ, ನ್ಯಾಯಲಯಕ್ಕೋ , ಲೋಕಾಯುಕ್ತಕ್ಕೋ ದೂರು ನೀಡಲಿ’ ಎಂದು ಸವಾಲೆಸೆದರು.

-ಉದಯವಾಣಿ

Comments are closed.