ಕರ್ನಾಟಕ

ನಾನು ಮುಸ್ಲಿಂ ವಿರೋಧಿ ಅಲ್ಲ,ಆದರೆ…ಸಚಿವ ಹೆಗಡೆ ಹೇಳಿದ್ದೇನು?

Pinterest LinkedIn Tumblr


ಕಾರವಾರ: ‘ನಾನು ಮುಸ್ಲಿಂ ವಿರೋಧಿ ಅಲ್ಲ. ಆದರೆ ಇನ್ನೊಂದು ಸಮಾಜವನ್ನು ತುಳಿದು ಬದುಕಬೇಕು ಎನ್ನುವುದನ್ನು ಒಪ್ಪುವುದಿಲ್ಲ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‌ ಕುಮಾರ್‌ ಹೆಗಡೆ ಮಂಗಳವಾರ ಹೇಳಿದ್ದಾರೆ.

‘ಹಿಂದುಳಿದ ರೋಗ ಕೊಟ್ಟಿದ್ದೆ ಕಾಂಗ್ರೆಸ್‌. ಮೀಸಲಾತಿ ಹೆಸರಿನಲ್ಲಿ ಹಿಂದುಳಿದವರನ್ನು ಒಡೆದು ಆಳುವ ಕೆಲಸ ಕಾಂಗ್ರೆಸ್‌ ಮಾಡಿದೆ. ಜನರಿಗೆ ಆತ್ಮವಿಶ್ವಾಸ ತುಂಬುವ ಬದಲು ಉಚಿತ ಯೋಜನೆ ಗಳನ್ನು ಕೊಟ್ಟಿದೆ’ ಎಂದು ಕಿಡಿ ಕಾರಿದರು.

‘ಕಾಂಗ್ರೆಸ್‌ ಇರುವವರೆಗೆ ದೇಶ ಉದ್ಧಾರ ಆಗುವುದಿಲ್ಲ. ಆದ್ದರಿಂದ ಈ ಬಾರಿ ಕಾಂಗ್ರೆಸ್ಸನ್ನೂ ಎಂದೂ ತಲೆ ಎತ್ತದಂತೆ ಸೋಲಿಸಿ’ ಎಂದರು.

-ಉದಯವಾಣಿ

Comments are closed.