ಕರ್ನಾಟಕ

ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಮೋದಿಗೆ ಪ್ರಶ್ನೆ ಕೇಳಿ ಸವಾಲೆಸೆದ ಸಿದ್ದರಾಮಯ್ಯ !

Pinterest LinkedIn Tumblr

ಬೆಂಗಳೂರು: ರಾಜ್ಯದ ವಿವಿಧೆಡೆ ಚುನಾವಣಾ ಪ್ರಚಾರ ರ್‍ಯಾಲಿಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸದಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ಮೋದಿಯವರಿಗೆ ಆರು ಪ್ರಶ್ನೆಗಳನ್ನು ಕೇಳಿದ್ದಾರೆ.

‘ಬಳ್ಳಾರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ನಿಮ್ಮ ಮಾತುಗಳನ್ನು ಎದುರುನೋಡುತ್ತಿದ್ದೇವೆ. ರೆಡ್ಡಿ ಸಹೋದರರ ₹35,000 ಕೋಟಿ ಹಗರಣದ ಬಗ್ಗೆ ಮಾತನಾಡಲು ಮರೆಯಬೇಡಿ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜತೆಗೆ, ಯೆಡ್ಡಿ, ರೆಡ್ಡಿಯವರಂತಹ ತಾರಾ ಆಟಗಾರರ ನೆರವಿನಿಂದ ನಿಮಗೆ ಕರ್ನಾಟಕದಲ್ಲಿ 60ರಷ್ಟು ಸ್ಥಾನಗಳು ಮಾತ್ರವೇ ದೊರೆಯಲಿದೆ ಎಂದು ಉಲ್ಲೇಖಿಸಿದ್ದಾರೆ.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕರ್ನಾಟಕದ ಪುತ್ರ. ಅವರ ಹೆಸರಿನಲ್ಲಿ ರಾಜಕೀಯ ಮಾಡುವ ಬದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಕೇಳಿರುವ ಪ್ರಶ್ನೆಗಳು ಹೀಗಿವೆ:

1. ಕನ್ನಡ ಧ್ವಜಕ್ಕೆ ನೀವು ಮಾನ್ಯತೆ ನೀಡುತ್ತೀರಾ?

2. ಬ್ಯಾಂಕಿಂಗ್ ನೇಮಕಾತಿ ನಿಯಮವನ್ನು ನೀವು ಬದಲಾಯಿಸಲು ಸಿದ್ಧರಿದ್ದೀರಾ, ಕರ್ನಾಟಕದಲ್ಲಿ ಬ್ಯಾಂಕಿಂಗ್ ಉದ್ಯೋಗಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯಗೊಳಿಸಲು ತಯಾರಿದ್ದೀರಾ?

3. ಮಹದಾಯಿ ವಿಚಾರದಲ್ಲಿ ಮಧ್ಯ‍ಪ್ರವೇಶಿಸುವಿರಾ?

4. ರಾಜ್ಯ ವಿಪತ್ತು ನಿರ್ವಹಣಾ ನಿಧಿಯನ್ನು ಪರಿಷ್ಕರಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸುವಿರಾ?

5. ಬಿಇಎಂಎಲ್‌ನ ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಿರಾ?

6. ಎಚ್‌ಎಎಲ್‌ನಿಂದ ರಫೇಲ್‌ ಯೋಜನೆ ತಪ್ಪಿಸುವ ಮೂಲಕ ಮಾಡಿರುವ ಅನ್ಯಾಯವನ್ನು ಸರಿಪಡಿಸಲು ಸಿದ್ಧರಿದ್ದೀರಾ?

ಪ್ರಶ್ನೆಗಳ ಪಟ್ಟಿ ಇನ್ನೂ ದೊಡ್ಡದಿದೆ. ಆದರೆ, ಈ ವಿಷಯಗಳ ಬಗ್ಗೆ ನಮ್ಮ ರಾಜ್ಯಕ್ಕಾಗಿ ನೀವು ಗಮನಹರಿಸಬೇಕಿದೆ. ಆದರೆ, ನೀವು ಕೇವಲ ಗೆಲ್ಲುವುದಕ್ಕಾಗಿ ಕರ್ನಾಟಕದಲ್ಲಿದ್ದೀರಿ’ ಎಂದು ಸಿದ್ದರಾಮಯ್ಯ ಟ್ವಟಿರ್‌ನಲ್ಲಿ ಉಲ್ಲೇಖಿಸಿದ್ದಾರೆ.

Comments are closed.