ಕರ್ನಾಟಕ

ಕಾಂಗ್ರೆಸ್‌ಗೆ ಪರೋಕ್ಷ ನೆರವು? ಟಿಪ್ಪು ಮೈಸೂರಿನ ಹುಲಿ ಎಂದ ಪಾಕ್‌

Pinterest LinkedIn Tumblr


ಬೆಂಗಳೂರು: ಟಿಪ್ಪು ಸುಲ್ತಾನ್‌ ಮೃತಪಟ್ಟ 218ನೇ ವರ್ಷಾಚರಣೆಯ ಸಂದರ್ಭದಲ್ಲಿ ಪಾಕಿಸ್ಥಾನ ಸರಕಾರ ಆತನನ್ನು “ಮೈಸೂರಿನ ಹುಲಿ’ ಎಂದು ಟ್ವಿಟರ್‌ನಲ್ಲಿ ಬಣ್ಣಿಸಿರುವುದು, ಪ್ರಕೃತ ಚುನಾವಣೆಗೆ ನಿಕಟವಾಗಿರುವ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ತೀವ್ರ ವಾಕ್ಸಮರಕ್ಕೆ ಕಾರಣವಾಗಲಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಿದೆ.

ಪಾಕ್‌ ಸರಕಾರ ಇಂದು ಶುಕ್ರವಾರ “ಮೈಸೂರಿನ ಹಿಂದಿನ ಅರಸ ಟಿಪ್ಪು ಸುಲ್ತಾನ್‌ ಅತ್ಯಂತ ದಿಟ್ಟ ಮತ್ತು ನಿರ್ಭಯ ಯೋಧ’ ಎಂದು ತನ್ನ ಟ್ವಿಟರ್‌ ಖಾತೆಯಲ್ಲಿ ವರ್ಣಿಸಿದೆ. ಅಂತೆಯೇ ಟಿಪ್ಪುವನ್ನು ಮೈಸೂರಿನ ಹುಲಿ ಎಂದು ಕೊಂಡಾಡಿದೆ.

ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿ ವ್ಯಾಪಕ ಟೀಕೆ, ಖಂಡನೆ, ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಟಿಪ್ಪು ಕುರಿತ ಪಾಕ್‌ ಟ್ವೀಟ್‌ ಹೊಸ ವಾಕ್ಸಮರಕ್ಕೆ ಕಾರಣವಾಗಲಿದೆ ಎಂದು ತಿಳಿಯಲಾಗಿದೆ.

ಮೈಸೂರಿನ ಮುಸ್ಲಿಂ ಆಡಳಿತಗಾರ, ಬಾದ್‌ಶಾ ನಸೀಬುದ್‌ದೌಲ ಸುಲ್ತಾನ್‌ ಫ‌ತೇ ಅಲಿ ಬಹಾದ್ದೂರ್‌ ಸಾಹಬ್‌ ಟಿಪ್ಪು ಅಲಿಯಾಸ್‌ ಟಿಪ್ಪು ಸುಲ್ತಾನ್‌ ಮೃತಪಟ್ಟ 218ನೇ ವರ್ಷಾಚರಣೆಯ ಸಂದರ್ಭದಲ್ಲಿ ಪಾಕ್‌ ಸರಕಾರ ಆತನನ್ನು “ಮೈಸೂರಿನ ಹುಲಿ’ ಎಂದು ಟ್ವಿಟರ್‌ನಲ್ಲಿ ಕೊಂಡಾಡಿದೆ.

ಪಾಕಿಸ್ಥಾನದ ಕುತ್ಸಿತ ರಾಜಕಾರಣದ ಈ ಟ್ವೀಟ್‌ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪರೋಕ್ಷವಾಗಿ ನೆರವಾಗುವ ಉದ್ದೇಶ ಹೊಂದಿದೆ ಎಂದು ಬಿಜೆಪಿ ಆರೋಪಿಸಿದೆ.

-Udayavani

Comments are closed.