ಕರ್ನಾಟಕ

ಮಹದಾಯಿ ವಿಚಾರವನ್ನು ನಾವು ಮಾತುಕತೆ ಮೂಲಕ ಪರಿಹರಿಸಲು ಬದ್ಧ: ಮೋದಿ

Pinterest LinkedIn Tumblr

ಗದಗ: ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿದೆ ಎಂದು ವಾಗ್ದಾಳಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಹದಾಯಿ ವಿಚಾರವನ್ನು ನಾವು ಮಾತುಕತೆ ಮೂಲಕ ಪರಿಹರಿಸಲು ಬದ್ಧರಾಗಿದ್ದೇವೆ ಎಂದು ಹೇಳಿ ‘ಮಹದಾಯಿ ದಾಳ’ ಉರುಳಿಸಿದರು.

ಗದಗಿನ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಸಮೃದ್ಧ ಕೆರೆಗಳು ನೀರಿಲ್ಲದ್ದೆ ಬರಿದಾಗಿವೆ. ನೀರು ನೀರು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕೆರೆಗಳ ಪುನಶ್ಚೇತನಕ್ಕೆ ಕಾಂಗ್ರೆಸ್‌ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಕೆರೆಗಳು ಬರಿದಾಗಿ ಒಣಗುವುದನ್ನೇ ಕಾಯುತ್ತಿದ್ದಾರೆ. ಬಿಲ್ಡರ್‌ಗಳಿಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ ಸುಳ್ಳು ಹೇಳು ಹೇಳಿ, ಜನರ ಕಣ್ಣಿಗೆ ಮಣ್ಣೆರಚುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್‌ ಅಧಿಕಾರಕ್ಕಾಗಿ ಜನರನ್ನು ಮರುಳು ಮಾಡುತ್ತದೆ ಎಂಬುದಕ್ಕೆ ಒಂದು ಉದಾಹಣೆ ಹೇಳುತ್ತೇನೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಮಹದಾಯಿ ಸ್ವಚ್ಛ ನೀರಿನಲ್ಲಿ ಕಾಂಗ್ರೆಸ್‌ ಮಾಡುತ್ತಿರುವ ರಾಜಕೀಯ ಎಂದು ಮೋದಿ ಮಹದಾಯಿ ವಿಷಯವನ್ನು ಉಲ್ಲೇಖಿಸಿ ಮಾತು ಮುಂದುವರಿಸಿದರು.

ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ ನಡೆದುಕೊಂಡ ಬಗೆ ಹಾಗೂ ಅವರು ಏನೇನು ಮಾಡಿದರು ಎಂಬುನ್ನು ನಾನು ನಿಮ್ಮ ಮುಂದೆ ತೆರೆದಿಡುತ್ತೇನೆ. 2007ರಲ್ಲಿ ನಡೆದ ಗೋವಾ ಚುನಾವಣೆಯಲ್ಲಿ ಮಹದಾಯಿ ವಿಚಾರವಾಗಿ ಸೊನಿಯಾ ಗಾಂಧಿ ಭಾಷಣ ಮಾಡಿದ್ದರು. ಆಗ ಏನು ಹೇಳಿದರು ಎಂದು ಇಲ್ಲಿನ ಮುಖ್ಯಮಂತ್ರಿಗೆ ಗೊತ್ತಿಲ್ಲ. ಅವರು ಈಗ ಮುಖ್ಯಮಂತ್ರಿ ಆದರೆ, ಅವರು ಆಗ ಕಾಂಗ್ರೆಸ್‌ನಲ್ಲಿ ಇರಲಿಲ್ಲ, ದಳದಲ್ಲಿದ್ದರು, ಪಕ್ಷ ಬದಲಿಸುವುದು ಅವರಿಗೆ ಸಹಜ, ಆದ್ದರಿಂದ 2007ರಲ್ಲಿ ಎಲ್ಲಿದ್ದಿರಿ ಎಂಬುದು ಹಾಗೂ ಸೋನಿಯಾ ಗಾಂದಿ ಏನು ಹೇಳಿದ್ದರು ಎಂದು ನಿಮಗೆ ನೆನಪಿಲ್ಲ ಎಂದು ಹಿಂದಿನ ಸಂಗತಿಗಳನ್ನು ಮೆಲುಕು ಹಾಕಿದರು.

ಮುಖ್ಯಮಂತ್ರಿಗಳೇ, ಇಲ್ಲಿನ ರೈತರನ್ನು ಹಾದಿತಪ್ಪಿಸುವ ಬದಲು ಮಹದಾಯಿ ವಿಚಾರವಾಗಿ ನಿಮ್ಮ ನಿಲುವೇನು ಎಂಬುದನ್ನು ಸೋನಿಯಾ ಗಾಂಧಿಯವರ ಜತೆ ಮಾತನಾಡಿ ಸ್ಪಷ್ಟಪಡಿಸಿ. ಕರ್ನಾಟಕದ ರೈತರ, ಯುವಕರ ಹಾದಿತಪ್ಪಿಸಬೇಡಿ ಎಂದು ಮೋದಿ ಹೇಳಿದರು.

ಗೋವಾದ ಮಡಗಾಂವ್‌ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಮಹದಾಯಿಯ ಒಂದು ಹನಿ ನೀರು ಕರ್ನಾಟಕಕ್ಕೆ ಸಿಗದಂತೆ ನೋಡಿಕೊಳ್ಳುವುದು ನಮ್ಮ ಬದ್ಧತೆ ಎಂದು ಹೇಳಿದ್ದರು. ಈಗ ಪಕ್ಷದ ಅಧ್ಯಕ್ಷರು ಕರ್ನಾಟಕಕ್ಕೆ ಬಂದು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ ಎಂದು ದೂರಿದರು.

ಯೋಜನೆಗಳನ್ನು ಅರ್ಧಕ್ಕೆ ಬಿಡುವುದು ಕಾಂಗ್ರೆಸ್‌ ಸಂಸ್ಕೃತಿ. ‘ಅಟಕಾನಾ, ಲಟಕಾನಾ, ಭಟಕಾನಾ’ (ಸಿಕ್ಕಿಸುವುದು, ತೂಗು ಹಾಕುವುದು, ಅಲೆದಾಡಿವುದು) ಇದು ಕಾಂಗ್ರೆಸ್‌ನ ಸಂಸ್ಕೃತಿ, ಚರಿತ್ರೆ. ಇದೇ ಕೆಲಸವನ್ನು ಮಾಡುವ ಮೂಲಕ ಈ ಮಹದಾಯಿ ವಿಷಯವನ್ನು ತೆಗೆದುಕೊಂಡು ಹೋಗಿ ಟ್ರಿಬ್ಯುನಲ್‌ಗೆ ಹಾಕಿ ಕಾಂಗ್ರೆಸ್‌ ಪಾಪದ ಕೆಲಸ ಮಾಡಿದೆ. ಈ ಸಮಸ್ಯೆಯನ್ನು ಹುಟ್ಟುಹಾಕಿದ್ದು ಕಾಂಗ್ರೆಸ್‌. ನೀರು ಜೀವನಕ್ಕೆ ಮತ್ವದ್ದು, ಅತ್ಯವಶ್ಯಕವಾದುದು. ನೀರಿನ ಹಕ್ಕು ಎಲ್ಲರಿಗೂ ಇದೆ. ನಾವು ಮಹದಾಯಿ ಸಮಸ್ಯೆಯನ್ನು ಒಂದೆಡೆ ಕುಳಿತು ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಗೆಹರಿಸಲು ಬದ್ಧರಿದ್ದೇವೆ ಎಂದು ಮೋದಿ ಹೇಳಿದರು.

Comments are closed.