ಕರ್ನಾಟಕ

ರೆಬೆಲ್‌ಸ್ಟಾರ್‌ ಜೆಡಿಎಸ್‌ಗೆ?ಅಂಬಿ ಜೊತೆ ಎಚ್‌ಡಿಕೆ ಮಹತ್ವದ ಮಾತುಕತೆ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ ವಿರುದ್ಧ ತೀವ್ರ ಅಸಮಾಧಾನ ಹೊಂದಿರುವ ಹಿರಿಯ ನಟ, ಶಾಸಕ ಅಂಬರೀಷ್‌ ಅವರನ್ನು ಚೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಶನಿವಾರ ರಾತ್ರಿ ಗಾಲ್ಫ್ ಕ್ಲಬ್‌ ಬಳಿ ಇರುವ ಅಂಬರೀಷ್‌ ಅವರ ನಿವಾಸಕ್ಕೆ ಆಗಮಿಸಿದ ಎಚ್‌ಡಿಕೆ 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ನನ್ನನ್ನು ಕೇಳದೆ ಸಚಿವ ಸ್ಥಾನದಿಂದ ಕಿತ್ತು ಹಾಕಿ ಕಾಂಗ್ರೆಸ್‌ ನನಗೆ ಅವಮಾನ ಮಾಡಿದೆ ಎಂದು ಅಂಬರೀಷ್‌ ಅವರು ಎಚ್‌ಡಿಕೆ ಅವರ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂಬರೀಷ್‌ ಅವರು ಚುನಾವಣಾ ರಾಜಕೀಯದಿಂದ ಈಗಾಗಲೆ ಹಿಂದೆ ಸರಿದಿದ್ದು, ಕೊನೆ ಕ್ಷಣದಲ್ಲಿ ಜೆಡಿಎಸ್‌ ಪರ ಪ್ರಚಾರ ನಡೆಸುತ್ತಾರೊ ಎಂದು ಕಾದು ನೋಡಬೇಕಾಗಿದೆ.

-Udayavani

Comments are closed.