ಕರ್ನಾಟಕ

ಬಿಜೆಪಿಯವರಿಂದ ಬಾಲಿವುಡ್ ಆಫರ್‌ಗೆ ಕತ್ತರಿ ಎಂದ ಪ್ರಕಾಶ್ ರಾಜ್

Pinterest LinkedIn Tumblr


ಹುಬ್ಬಳ್ಳಿ: ಬಿಜೆಪಿ ನಾಯಕರ ಪಿತೂರಿ ಇಂದಾಗಿ ನನಗೆ ಬಾಲಿವುಡ್‌ನಿಂದ ಆಫರ್‌ಗಳು ಬರದಂತಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನ್ನಾಡುತ್ತಿದ್ದ ಅವರು, ನಾನೇನು ಕೆಟ್ಟ ನಟನಲ್ಲ. ನಾನು ಅಭಿನಯಿಸಿರುವ ಚಿತ್ರಗಳು ಚೆನ್ನಾಗಿಯೇ ಓಡುತ್ತಿವೆ. ಆದರೂ ಯಾವುದೇ ಬಾಲಿವುಡ್ ಚಿತ್ರಗಳ ಆಫರ್ ಬರುತ್ತಿಲ್ಲ. ಯಾವುದೇ ನಿರ್ದೇಶಕರು ನನ್ನನ್ನು ಸಂಪರ್ಕಿಸುತ್ತಿಲ್ಲ. ಈ ವಿಷಯದಲ್ಲಿಯೂ ಬಿಜೆಪಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ಹೇಳಿದ್ದಾರೆ.

ಜನರು ದೇಶದಲ್ಲಿ ಭಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಜಸ್ಟ್‌ ಆಸ್ಕಿಂಗ್ ರಾಜಕೀಯ ಪಕ್ಷವಲ್ಲ, ಅದೊಂದು ಆಂದೋಲನ. ನಾವು ಪ್ರಶ್ನೆಗಳನ್ನು ಕೇಳಲ್ಲ, ಚರ್ಚಾಕೂಟಗಳನ್ನು ಏರ್ಪಡಿಸುತ್ತೇವೆ. ಚುನಾವಣೆ ನಂತರವೂ ನಮ್ಮ ನಿರಂತರ ಹೋರಾಟ ಮುಂದುವರಿಯುತ್ತೆ ಎಂದಿದ್ದಾರೆ.

ನಾನು ಯಾವುದೇ ಪಕ್ಷದ ವಿರೋಧಿಯಲ್ಲ. ಕಾಂಗ್ರೆಸ್ ಕೂಡ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿತ್ತು, ಹಲವು ಕನ್ನಡ ಚಿತ್ರಗಳನ್ನು ಕಾಂಗ್ರೆಸ್ ಸರಕಾರ ಬ್ಯಾನ್ ಮಾಡಿದೆ. ಯಾವುದೇ ಸರ್ಕಾರ ಬಂದರೂ ನಾನು ಪ್ರಶ್ನೆ ಕೇಳುತ್ತೇನೆ. ಎಲ್ಲರನ್ನೂ ಪ್ರಶ್ನಿಸುವುದು ನಮ್ಮ ಜವಾಬ್ದಾರಿ.ಬಿಜೆಪಿಯರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್, ಜೆಡಿಎಸ್‌ನಲ್ಲಿ ಯಾವುದನ್ನಾದರೂ ಜನರು ಆಯ್ಕೆ ಮಾಡಿಕೊಳ್ಳಿ, ಬಿಜೆಪಿಗೆ ಮಾತ್ರ ಮತ ಹಾಕಬೇಡಿ ಎಂದವರು ಆಗ್ರಹಿಸಿದ್ದಾರೆ.

ನಾನು ಹಿಂದುತ್ವದ ವಿರೋಧಿಯಲ್ಲ. ನಾನು ಪ್ರಶ್ನೆ ಕೇಳಿದ್ರೆ ಹಿಂದೂ ಧರ್ಮದ ವಿರೋಧಿ ಅಂತೀರಿ ಯಾಕೆ? ನನ್ನ ವಯಕ್ತಿಕ ಜೀವನದ ಬಗ್ಗೆ ಯಾಕೆ ಮಾತಾಡ್ತೀರಿ? ಎಂದವರು ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.

Comments are closed.