ಕರ್ನಾಟಕ

ನೆಲಮಂಗಲದಲ್ಲಿ ಭಾಷಣವನ್ನು ತಪ್ಪು ತಪ್ಪು ಅನುವಾದ ಮಾಡುತ್ತಿದ್ದ ಮಹಿಳೆ ವಿರುದ್ಧ ಅಮಿತ್ ಶಾ ಗರಂ ! ಮೈಕ್ ಕಿತ್ತುಕೊಂಡ ಅಶೋಕ್

Pinterest LinkedIn Tumblr

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ತ ಕರ್ನಾಟಕದಲ್ಲಿ ಬೀಡು ಬಿಟ್ಟಿರುವ ಅಮಿತ್ ಶಾಗೆ ಭಾಷಾಂತರ ಸಮಸ್ಯೆ ಮತ್ತೆ ಮುಂದುವರೆದಿದ್ದು, ತಪ್ಪು ತಪ್ಪು ಅನುವಾದ ಮಾಡುತ್ತಿದ್ದ ಮಹಿಳೆ ವಿರುದ್ಧ ಅಮಿತ್ ಶಾ ಗರಂ ಆದ ಘಟನೆ ನಡೆದಿದೆ.

ಬೆಂಗಳೂರಿನ ನೆಲಮಂಗಲದ ಸಾರ್ವಜನಿಕ ಸಭೆಯಲ್ಲಿ ಈ ಘಟನೆ ನಡೆದಿದ್ದು, ಅಮಿತ್ ಶಾ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಭಾಷಾಂತರಕ್ಕೆ ನಿಯೋಜನೆಗೊಂಡಿದ್ದ ಮಹಿಳೆ ತಪ್ಪು ತಪ್ಪಾಗಿ ಭಾಷಾಂತರ ಮಾಡುತ್ತಿದ್ದರು. ರಾಹುಲ್ ಗಾಂಧಿ ಕುರಿತು ಅಮಿತ್ ಶಾ ಟೀಕಿಸುತ್ತಿದ್ದ ವೇಳೆ ಅದನ್ನು ಭಾಷಾಂತರ ಮಾಡಿದ್ದ ಮಹಿಳೆ ರಾಹುಲ್ ಗಾಂಧಿ ಕುರಿತ ಹೇಳಿಕೆಯನ್ನಷ್ಚೇ ಅಲ್ಲದೇ ಪ್ರಧಾನಿ ಮೋದಿ ಅವರನ್ನೂ ಹೊಗಳುವ ಮೂಲಕ ಅಮಿತ್ ಶಾ ಆಕ್ರೋಶಕ್ಕ ಗುರಿಯಾಗಿದ್ದರು.

ಮಹಿಳೆಯ ತಪ್ಪು ತಪ್ಪು ಭಾಷಾಂತರದಿಂದಾಗಿ ಅಸಮಾಧಾನಗೊಂಡ ಅಮಿತ್ ಶಾ, ನಾನು ಹೇಳಿದ್ದನ್ನಷ್ಟೇ ಕನ್ನಡದಲ್ಲಿ ಹೇಳಿ. ವಿಶ್ವಗುರು ಎಂದೆಲ್ಲಾ ನಾನು ಯಾವಾಗ ಹೇಳಿದೆ. ನಾನು ಏನು ಹೇಳುತ್ತೇನೋ ಅದನ್ನು ಮಾತ್ರ ಕನ್ನಡದಲ್ಲಿ ಹೇಳಿ ಸಾಕು ಎಂದರು. ಈ ವೇಳೆಗಾಗಲೇ ವೇದಿಕೆಯಲ್ಲಿ ಕುಳಿತಿದ್ದ ಬಿಜೆಪಿ ಮುಖಂಡ ಆರ್ ಅಶೋಕ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಾವೇ ಖುದ್ಧುಅಮಿತ್ ಶಾ ಬಳಿ ಮಹಿಳೆಯಿಂದ ಮೈಕ್ ಕಸಿದುಕೊಂಡು ಭಾಷಾಂತರ ಮಾಡಿದರು. ಇದರಿಂದ ಕೊಂಚ ವಿಚಲಿತರಾದ ಮಹಿಳೆ ವೇದಿಕೆ ಹಿಂಭಾಗಕ್ಕೆ ಸರಿದರು.

ಭಾಷಾಂತರ ಸಂಕಟ ಇದೇ ಮೊದಲೇನಲ್ಲ
ಇನ್ನು ಅಮಿತ್ ಶಾಗೆ ಭಾಷಾಂತರಕಾರರ ಸಮಸ್ಯೆ ಇದೇ ಮೊದಲೇನಲ್ಲ. ಈ ಹಿಂದೆ ಚಳ್ಳಕೆರೆಯಲ್ಲಿ ನಡೆದ ರ್ಯಾಲಿ ಸಂದರ್ಭದಲ್ಲೂ ಇದೇ ಸಮಸ್ಯೆ ಎದುರಾಗಿತ್ತು. ಅಂದು ಅಮಿತ್ ಶಾಗೆ ಭಾಷಾಂತರಕಾರರಾಗಿದ್ದ ಪ್ರಹ್ಲಾದ್ ಜೋಷಿ, ಸಿಎಂ ಸಿದ್ದರಾಮಯ್ಯ ದಲಿತರಿಗೆ ಏನೂ ಮಾಡಿಲ್ಲ. ಅವರ ಆಡಳಿತದ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಯಾವುದೇ ನೆರವಾಗಿಲ್ಲ ಎಂದು ಹೇಳುವ ಬದಲಿಗೆ ನರೇಂದ್ರ ಮೋದಿ ದಲಿತರಿಗೆ ಏನೂ ಮಾಡಿಲ್ಲ. ಅವರ ಆಡಳಿತದ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಯಾವುದೇ ನೆರವಾಗಿಲ್ಲ ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದರು. ಕೇವಲ ಪ್ರಹ್ಲಾದ್ ಜೋಷಿ ಅಷ್ಟೇ ಅಲ್ಲ..ಸ್ವತ- ಅಮಿತ್ ಶಾ ಕೂಡ ತಮ್ಮ ಸಿಎಂ ಅಭ್ಯರ್ಥಿ ಯಡಿಯೂರಪ್ಪ ಅವರನ್ನು ದೇಶಕಂಡ ಅತ್ಯಂತ ಭ್ರಷ್ಟ ಸಿಎಂ ಎಂದು ಹೇಳುವ ಮೂಲಕ ಮುಜುಗರ ತಂದಿದ್ದರು.

Comments are closed.