ಕರ್ನಾಟಕ

ಎಬಿಪಿ ನ್ಯೂಸ್ ಚುನಾವಣಾ ಸಮೀಕ್ಷೆ ಬಹಿರಂಗ; ಯಾರಿಗೆ ಗದ್ದುಗೆ?

Pinterest LinkedIn Tumblr


ನವದೆಹಲಿ: ಕರ್ನಾಟಕ ಚುನಾವಣಾ ಅಖಾಡ ರಂಗೇರುತ್ತಿರುವ ನಡುವೆಯೇ ಎಬಿಪಿ ನ್ಯೂಸ್ ಹಾಗೂ ಜೈನ್ ಲೋಕನೀತಿ ಸಿಎಸ್ ಡಿಎಸ್ ನಡೆಸಿದ ಸಮೀಕ್ಷೆ ಬಹಿರಂಗವಾಗಿದ್ದು, ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಎಬಿಪಿ ನ್ಯೂಸ್ ಹಾಗೂ ಜೈನ್ ಲೋಕನೀತಿ ಸಿಎಸ್ ಡಿಎಸ್ ಸಮೀಕ್ಷೆ ಪ್ರಕಾರ 225 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 97 ಸ್ಥಾನ, ಬಿಜೆಪಿ 84 ಸ್ಥಾನ ಪಡೆಯಲಿದ್ದು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.

ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಪಕ್ಷ ಶೇ.38ರಷ್ಟು ಮತಗಳನ್ನು ಪಡೆಯಲಿದ್ದು, ಬಿಜೆಪಿ ಶೇ.33ರಷ್ಟು, ಬಿಎಸ್ಪಿ ಜತೆಗಿನ ಚುನಾವಣಾ ಪೂರ್ವ ಮೈತ್ರಿಯಿಂದಾಗಿ ಜೆಡಿಎಸ್ ಶೇ.22ರಷ್ಟು ಮತ ಪಡೆಯಲಿದೆ ಎಂದು ತಿಳಿಸಿದೆ.

-Udayavani

Comments are closed.