ಕರ್ನಾಟಕ

ಮಹಿಳೆಯಿಂದ ಬುರ್ಖಾ ತೆಗೆಯಲು ನಿರಾಕರಣೆ: ಮತದಾನ ಮಾಡಲು ನಿರ್ಬಂಧ

Pinterest LinkedIn Tumblr


ಬೆಂಗಳೂರು: ಬೆಳಗಾವಿಯ ಮತಗಟ್ಟೆಯೊಂದರಲ್ಲಿ ಗುರುತು ಪತ್ತೆಗಾಗಿ ಬುರ್ಖಾ ತೆಗೆಯಲು ಒಪ್ಪದ ಮುಸ್ಲಿಂ ಮಹಿಳಾ ಮತದಾರರೊಬ್ಬರನ್ನು ತಡೆದ ಘಟನೆ ವರದಿಯಾಗಿದೆ.

ಅನಂತರ ಮಹಿಳಾ ಅಧಿಕಾರಿಯೊಬ್ಬರು ಆಕೆಯ ಗುರುತು ದೃಢಪಡಿಸಿದ ಬಳಿಕ ಮತದಾನ ಮಾಡಲು ಅವಕಾಶ ನೀಡಲಾಯಿತು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಕೊನೆಯ ಹಂತ ಸಮೀಪಿಸುತ್ತಿದೆ. ಒಟ್ಟು 2.645 ಅಭ್ಯರ್ಥಿಗಳು ಕಣದಲ್ಲಿದ್ದು, 4.96 ಕೋಟಿ ಮತದಾರರು (2.44 ಕೋಟಿ ಮಹಿಳೆಯರು ಸೇರಿದಂತೆ) ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 15 ಲಕ್ಷಕ್ಕೂ ಹೆಚ್ಚು ಮಂದಿ 18-19 ವರ್ಷ ವಯಸ್ಸಿನ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಸುಗಮ ಚುನಾವಣೆಗಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಒಟ್ಟು 224 ಕ್ಷೇತ್ರಗಳ ಪೈಕಿ 222 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

Comments are closed.