ಕರ್ನಾಟಕ

111ರ ಹರೆಯದ ನಡೆದಾಡುವ ದೇವರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಮತದಾನ

Pinterest LinkedIn Tumblr


ತುಮಕೂರು: ನಾಡಿನ ಅತ್ಯಂತ ಹಿರಿಯ ಮತದಾರರೂ ಆಗಿರುವ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಅವರು ಇಂದು ತಮ್ಮ ಮತ ಚಲಾಯಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮಠದ ಆವರಣದಲ್ಲಿರುವ ಸಿದ್ದಲಿಂಗೇಶ್ವರ ಪಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 133ರಲ್ಲಿ ಶ್ರೀಗಳು ಮತಚಲಾಯಿಸಿದರು. ಇದಕ್ಕೂ ಮೊದಲು ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಅವರೂ ಇದೇ ಮತಗಟ್ಟೆಯಲ್ಲೇ ಮತದಾನ ಮಾಡಿದರು.

ನಂತರ ಮಾತನಾಡಿದ ಕಿರಿಯ ಶ್ರೀಗಳು ನಾಡಿನ ಜನರು ಭಯವಿಲ್ಲದೆ ಮುಕ್ತ ಮತದಾನ ಮಾಡಿ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು. ಈ ಚುನಾವಣೆಯಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಮಾಡಬೇಕು ಎಂದರು.

ರಾಜ್ಯದ ಹಿರಿಯ ಮತದಾರ 111 ವರ್ಷದ ಸಿದ್ಧಗಂಗಾ ಶ್ರೀಗಳು

ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಅವರೇ ರಾಜ್ಯದ ಹಿರಿಯ ಮತದಾರ. 111 ವರ್ಷದ ಶ್ರೀಗಳು 1951ರಲ್ಲಿ ನಡೆದ ದೇಶದ ಪ್ರಪ್ರಥಮ ಸಾರ್ವತ್ರಿಕ, ಲೋಕಸಭಾ ಚುನಾವಣೆಯಲ್ಲಿ ಮೊದಲು ಹಕ್ಕು ಚಲಾಯಿಸಿದ್ದರು. ಅಂದಿನಿಂದ 2014ರ ವರೆಗೆ ಒಟ್ಟು 15 ಲೋಕಸಭಾ ಚುನಾವಣೆ ಮತ್ತು 1957ರಿಂದ 2013ರ ವರೆಗೆ 13 ವಿಧಾನಸಭೆ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. ಮೊದಲೆರಡು ಲೋಕಸಭಾ ಚುನಾವಣೆಗಳಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಮೈಸೂರು ಪ್ರಾಂತ್ಯದಲ್ಲಿತ್ತು.

Comments are closed.