ಬೆಂಗಳೂರು: ಇನ್ಫೋಸಿಸ್‌ನ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕ ಸ್ಥಾನಕ್ಕೆ ರವಿ ವೆಂಕಟೇಶನ್ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಆಡಳಿತ ಮಂಡಳಿಯ ಪುನಾರಚನೆ ಯೋಜನೆಯ ಭಾಗವಾಗಿ ರವಿ ರಾಜೀನಾಮೆ ಸಲ್ಲಿಸಿದ್ದಾರೆ.
ದೇಶದ ಎರಡನೇ ಬೃಹತ್ ಐಟಿ ಹೊರಗುತ್ತಿಗೆ ಕಂಪನಿಯಾದ ಇನ್ಫೋಸಿಸ್‌ನ ಆಡಳಿತ ಮಂಡಳಿಗೆ 2011ರಲ್ಲಿ ರವಿ ವೆಂಕಟೇಶನ್ ಸೇರ್ಪಡೆಯಾಗಿದ್ದರು. ಅವರ ಅಧಿಕಾರಾವಧಿ 2019ರ ಏಪ್ರಿಲ್‌ಗೆ ಮುಕ್ತಾಯವಾಗಬೇಕಿತ್ತು. ಆದರೆ, ಆಡಳಿತ ಮಂಡಳಿ ಪುನಾರಚನೆ ಹಿನ್ನೆಲೆಯಲ್ಲಿ ಅವಧಿಗೆ ಮೊದಲೇ ಅಧಿಕಾರ ತ್ಯಜಿಸಿದ್ದಾರೆ. ಕಳೆದ ತಿಂಗಳಷ್ಟೇ ಕಿರಣ್ ಮಜುಂಮ್ದಾರ್ ಶಾ ಅವರಿಗೆ ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿ ಸ್ಥಾನ ಮಾನ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
ಕಳೆದ ವರ್ಷದ ಆಗಸ್ಟ್ 17ರಂದು ಇನ್ಫೋಸಿಸ್ ಆಡಳಿತ ಮಂಡಳಿಯು ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರನ್ನು ದೂಷಿಸಿತ್ತು. ಆಗಿನ ಸಿಇಒ ವಿಶಾಲ್ ಸಿಕ್ಕ ನಿರ್ಗಮನದ ಬಳಿಕ ಕಂಪನಿಯಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣ ತಿಳಿಗೊಳಿಸಲು ನಂದನ್ ನಿಲೇಕಣಿ ಯತ್ನಿಸಿದ್ದರು.
Comments are closed.