ಕರ್ನಾಟಕ

ಮಾಜಿ ಸಚಿವ ಕೆ.ಎಚ್.ಹನುಮೇಗೌಡ ಸಿಡಿಲು ಬಡಿದು ಮೃತ

Pinterest LinkedIn Tumblr


ಹಾಸನ: ಹಿರಿಯ ರಾಜಕೀಯ ನಾಯಕ, ಮಾಜಿ ಸಚಿವ ಕೆ.ಎಚ್.ಹನುಮೇಗೌಡ ಸಿಡಿಲು ಬಡಿದು ಮೃಪಟ್ಟಿದ್ದಾರೆ. ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ತಾಲೂಕಿನ ಕೆ.ಬ್ಯಾಡರಹಳ್ಳಿಯ ಹನುಮೇಗೌಡರು ರಾಜಕೀಯ ಜೀವನ ಆರಂಭಿಸಿದ್ದು, 1972ರಲ್ಲಿ. ಸಂಸ್ಥಾ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದು, ನಾಲ್ಕು ಬಾರಿ ಶಾಸಕ, ಸಚಿವ ಹಾಗೂ 1994ರಲ್ಲಿ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಕಾಡ ಸಚಿವರಾಗಿದ್ದರು.

ಮಾಜಿ ಸಚಿವ ದಿ. ಶ್ರೀಕಂಠಯ್ಯ, ಜಿ.ಪುಟ್ಟಸ್ವಾಮಿಗೌಡ ಅವರೊಂದಿಗೆ ಸಂಘರ್ಷ ಸಾರಿ ಬಿಜೆಪಿಗೆ ಸೇರಿ 1999ರಲ್ಲಿ ಆ ಪಕ್ಷದಿಂದ ಶಾಸಕರಾಗಿದ್ದರು. ಬಿಜೆಪಿಯಿಂದ ಲೋಕಸಭೆಗೂ ಸ್ಪರ್ಧಿಸಿದ್ದರು. ಕುವೆಂಪು ನಗರದ ಅರವಿಂದ ಶಾಲೆ ಸಮೀಪದ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಸೋಮವಾರ ಕೆ.ಬ್ಯಾಡರಹಳ್ಳಿಯ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Comments are closed.