ಕರ್ನಾಟಕ

ಜೆಡಿಎಸ್ ಬಹುಮತ ಬರದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದಿದ್ದ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರು ಚುನಾವಣೆಗೆ ಮುನ್ನ ನೀಡಿದ ಈ ಹೇಳಿಕೆಯ ವಿಜಯ ಕರ್ನಾಟಕ ವರದಿ ಈಗ ವಾಟ್ಸ್‌ ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಜೆಡಿಎಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆಯೇ ಹೊರತು ಯಾರೊಂದಿಗೂ ಮೈತ್ರಿ ಇಲ್ಲ ಎಂದು ಎಚ್‌ಡಿಕೆ ಚಿಕ್ಕಬಳ್ಳಾಪುರದಲ್ಲಿ ಹೇಳಿಕೆ ನೀಡಿದ್ದರು.

ವೈರಲ್‌ ಆಗುತ್ತಿರುವ ಎಚ್‌.ಡಿ.ಕೆ ಹೇಳಿಕೆಯ ವರದಿ

ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಇದೀಗ, 38 ಸ್ಥಾನಗಳನ್ನು ಪಡೆದಿರುವ ಜೆಡಿಎಸ್‌, 78 ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಬೆಂಬಲದೊಂದಿಗೆ ಸರಕಾರ ರಚಿಸುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ಹೇಳಿಕೆ ಕುರಿತ ಸುದ್ದಿ ಮಾಧ್ಯಮವೊಂದರ ವರದಿಗೆ ಇಮೋಜಿಗಳನ್ನು ಸೇರಿಸಿದ ಚಿತ್ರಗಳು ವೈರಲ್‌ ಆಗುತ್ತಿವೆ.

ಕನ್ನಡದ ಖಾಸಗಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲೂ ಎಚ್‌ಡಿಕೆ ಇದೇ ಮಾತು ಹೇಳಿದ್ದರು. ಕಾಂಗ್ರೆಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ; ಜೆಡಿಎಸ್ ಸ್ವಂತ ಬಲದಿಂದಲೇ ಸರಕಾರ ರಚಿಸುತ್ತದೆ. ಒಂದೊಮ್ಮೆ ಅತಂತ್ರ ಪರಿಸ್ಥಿತಿ ಎದುರಾದರೆ ಮತ್ತೊಮ್ಮೆ ಜನರ ಮುಂದೆ ಚುನಾವಣೆಗೆ ಹೋಗುತ್ತೇನೆಯೇ ಹೊರತು ಮೈತ್ರಿ ಇಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಪ್ರತಿಪಾದಿಸಿದ್ದರು. ಕಾರ್ಯಕ್ರಮ ನಿರ್ವಾಹಕರು, ಕಾಂಗ್ರೆಸ್‌ನವರೇ ಬೆಂಬಲ ಕೊಡುವುದಾಗಿ ಮುಂದೆ ಬಂದರೆ ಆಗ ಏನು ಮಾಡುವಿರಿ ಎಂಬ ನಿರ್ದಿಷ್ಟ ಪ್ರಶ್ನೆ ಕೇಳಿದ್ದರು. ಆಗಲೂ ಕುಮಾರಸ್ವಾಮಿ ಇದೇ ಉತ್ತರ ನೀಡಿದ್ದರು.

Comments are closed.