ಕರ್ನಾಟಕ

ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪಗೆ ಲಿಂಗಾಯತ ಶಾಸಕರ ಕಾಯುವ ಜವಾಬ್ದಾರಿ!

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ನಲ್ಲಿರುವ ವೀರಶೈವ ಲಿಂಗಾಯತ ಶಾಸಕರಿಗೆ ಬಿಜೆಪಿ ಆಪರೇಶನ್‌ ಕಮಲ ಮಾಡುತ್ತಿದೆ ಎಂಬ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಶಾಸಕರು ಪಕ್ಷ ತೊರೆಯದಂತೆ ನೋಡಿಕೊಳ್ಳಲು ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್‌ ನಾಯಕರು ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ. ಕಾಂಗ್ರೆಸ್‌ನಲ್ಲಿ 16 ವೀರಶೈವ ಲಿಂಗಾಯತ ಶಾಸಕರಿದ್ದು, ಜೆಡಿಎಸ್‌ನಲ್ಲಿ 4 ವೀರಶೈವ ಲಿಂಗಾಯತ ಶಾಸಕರಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲು ಅವರಿಗೆ ಬೆಂಬಲ ನೀಡ ಬೇಕೆಂದು ವೀರಶೈವ ಲಿಂಗಾಯತ ಶಾಸಕರಿಗೆ ಲಿಂಗಾಯತ ಸಮುದಾಯ ಸ್ವಾಮೀಜಿಗಳು ಹಾಗೂ
ಮುಖಂಡರಿಂದ ಒತ್ತಡ ಬರುತ್ತಿದೆ ಎಂಬ ಕಾರಣಕ್ಕೆ ವಿಚಲಿತರಾಗದಂತೆ ನೋಡಿ ಕೊಳ್ಳಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಗುರುವಾರ ಗುಲಾಂ ನಬಿ ಆಝಾದ್‌, ಅಶೋಕ್‌ ಗೆಹೊÉàಟ್‌ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಿತು. ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಮಹಾಪ್ರಧಾನ ಕಾರ್ಯದರ್ಶಿಯೂ ಆಗಿ ರುವ ಮಾಜಿ ಸಚಿವ ಈಶ್ವರ್‌ ಖಂಡ್ರೆ ಮತ್ತು ಹುಮ್ನಾಬಾದ್‌ ಶಾಸಕ ಬಸವರಾಜ್‌ ಪಾಟೀಲ್‌ ಅವರನ್ನು ಸಭೆಗೆ ಕರೆಸಿಕೊಂಡು ಈ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Comments are closed.