ಕರ್ನಾಟಕ

ಸೋಲಿನ ಭೀತಿಯಿಂದ ಕಾಂಗ್ರೆಸ್ ನನ್ನ ಹೆಸರಿನ ನಕಲಿ ಆಡಿಯೋ ಬಿಡುಗಡೆ ಮಾಡಿದೆ: ಜನಾರ್ದನ ರೆಡ್ಡಿ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್ ನಾಯಕರು ಸತ್ಯ ಹರಿಶ್ಚಂದ್ರನ ವಂಶಸ್ಥರು ಎಂಬಂತೆ ನಾಟಕ ಮಾಡುತ್ತಿದ್ದಾರೆ ಮಾಜಿ ಸಚಿವ ಜನಾರ್ದನ ರೆಡ್ಡಿ ವ್ಯಂಗ್ಯವಾಡಿದ್ದಾರೆ.

100 ಕೋಟಿ ರೂ. ಆಫರ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿರುವ ಜನಾರ್ದನ ರೆಡ್ಡಿ, ಕಳೆದ 6 ದಶಕಗಳಿಂದ ಇವರು ಸಂವಿಧಾನವನ್ನು ಎಷ್ಟು ಬಾರಿ ದುರುಪಯೊಗ ಮಾಡಿಕೊಂಡಿದ್ದಾರೆ ಎಂಬುದು ದೇಶದ ಜನತೆಗೆ ಗೊತ್ತಿದೆ. ಈಗಲೂ ಅದೇ ಹಾದಿಯಲ್ಲಿ ಜನರನ್ನು ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾಳೆ ನಡೆಯುವ ವಿಶ್ವಾಸ ಮತ ಯಾಚನೆಯಲ್ಲಿ ಸೋಲಿನ ಭೀತಿಯಿಂದ ಅನಾವಶ್ಯಕವಾಗಿ ನನ್ನ ಹೆಸರಿನ ನಕಲಿ ಆಡಿಯೋ ಒಂದನ್ನು ಬಿಡುಗಡೆ ಮಾಡಿ ನನಗೆ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರ ಇದಾಗಿದೆ ಎಂದು ದೂರಿದ್ದಾರೆ.

ನಾಡಿನ ಜನತೆಗೆ ಗೊತ್ತಿದೆ ಇವರ ಬಣ್ಣ ಆಡಿಯೋದಲ್ಲಿ ಇರುವ ಧ್ವನಿಯನ್ನು ನನ್ನ ಹಾಗೆ ಮಾತನಾಡುವ ರೀತಿ ಆಧುನಿಕ ತಂತ್ರಗಾನ ದಿಂದ ಸಿದ್ಧಪಡಿಸಿಕೊಂಡು ನಕಲಿ ಆಡಿಯೋ ಬಿಡುಗಡೆ ಯಾವುದೇ ಸಂಭಂಧ ಇರುವುದಿಲ್ಲ ಎಂದು ಜನಾರ್ದನ ರೆಡ್ಡಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕರಾದ ವಿಎಸ್ ಉಗ್ರಪ್ಪ ಮತ್ತು ಪ್ರೊ ರಾಜೀವ್ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ ಜನಾರ್ದನ ರೆಡ್ಡಿ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ಅವರಿಗೆ ಕರೆ ಮಾಡಿ ಆಫರ್ ನೀಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದರು.

ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು ನೂರು, ನೂರೈವತ್ತು ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ. ಅಮಿತ್ ಶಾ ಕೂಡ ಆಮಿಷವೊಡ್ಡಿದ್ದಾರೆ. ನೂರು ಕೋಟಿ ರೂ. ಜೊತೆಗೆ ಕ್ಯಾಬಿನೆಟ್ ಸಚಿವ ಸ್ಥಾನದ ಆಮಿಷ ನೀಡಿದ್ದಾರೆ. ನಮ್ಮ ಶಾಸಕರ ಕುಟುಂಬದವರನ್ನ ಸಂಪರ್ಕಿಸಿ ಹಣ ನೀಡುವ ಕೆಲಸ ಮಾಡಿ, ಶಾಸಕರ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದ್ದರು.

Comments are closed.