ಕರ್ನಾಟಕ

ಯಡಿಯೂರಪ್ಪ ಪಲಾಯನವಾದಿ: ಸಿದ್ದರಾಮಯ್ಯ ವಾಗ್ದಾಳಿ

Pinterest LinkedIn Tumblr

ಬೆಂಗಳೂರು: ವಿಶ್ವಾಸಮತಕ್ಕೂ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಿಎಸ್ ಯಡಿಯೂರಪ್ಪ ಪಲಾಯನವಾದಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಧನ್ಯವಾದಗಳು. ಬಿಜೆಪಿಯ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಅವರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಕೋಮುವಾದಿ ಸರ್ಕಾರಕ್ಕೆ ನಮ್ಮ ಜನರು ಅವಕಾಶ ಕೊಟ್ಟಿಲ್ಲ ಎಂದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಮೋದಿ ಒಬ್ಬ ಹಿಟ್ಲರ್ ಎಂದು ಕಿಡಿಕಾರಿದರು.

ಮೋದಿ ಮತ್ತು ಅಮಿತ್ ಶಾ ಬಾರೀ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಅಭಿವೃದ್ಧಿ ಪರ ಮಾತು ಆಡದ ನಾಯಕರು, ಕೇಂದ್ರದಲ್ಲಿ ನಮ್ಮ ಸರ್ಕಾರ, ರಾಜ್ಯಪಾಲರು ನಮ್ಮವರು ಇದ್ದಾರೆ. ನಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದರೆ ಅದು ತಪ್ಪು ಕಲ್ಪನೆ ಎಂದರು.

ಬಿಜೆಪಿ ಶಾಸಕಾಂಗ ನಾಯಕರಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟರು. ಆದರೆ ಬಿಜೆಪಿ ನಾಯಕರು ಎಲ್ಲಾ ಪ್ರಜಾಪ್ರಭುತ್ವದ ಕರ್ತವ್ಯ, ಜವಾಬ್ದಾರಿ ಮರೆತು ,ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಜೆಪಿ ನಾಯಕರ ರೀತಿ‌ ಖಂಡನೀಯವಾದುದು. ಬಹುಮತ ಸಾಬೀತಿಗೆ ಕೇಳಿದ್ದು ಒಂದು ವಾರ ಸಮಯ. ಆದರೆ ರಾಜ್ಯಪಾಲರು ಕೊಟ್ಟಿದ್ದು 15 ದಿನ. ಇದು ನೋಡಿದರೆ ಇದರ ಹಿಂದೆ ಮೋದಿ ಇರುವುದು ಜಗಜ್ಜಾಹೀರಾಗಿದೆ ಎಂದು ಆರೋಪಿಸಿದರು.

Comments are closed.