ಕರ್ನಾಟಕ

ಕೇವಲ ಮೂರು ದಿನ ಮುಖ್ಯಮಂತ್ರಿಯಾಗಿ ಜಗದಾಂಬಿಕಾ ಪಾಲ್’ರ ದಾಖಲೆಯನ್ನು ಸರಿಗಟ್ಟಿದ ಯಡಿಯೂರಪ್ಪ !

Pinterest LinkedIn Tumblr

ಬೆಂಗಳೂರು: ಬಿಎಸ್ ಯಡಿಯೂರಪ್ಪ ವಿಶ್ವಾಸ ಮತಗಳಿಸಲು ವಿಫಲರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇವಲ ಮೂರು ದಿನಗಳ ಕಾಲ (55 ಗಂಟೆಗಳ ಕಾಲ) ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಯಡಿಯೂರಪ್ಪ ಈ ಮೂಲಕ ಜಗದಾಂಬಿಕಾ ಪಾಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅತೀ ಕಡಿಮೆ ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ವ್ಯಕ್ತಿ ಎಂಬ ದಾಖಲೆ ಉತ್ತರಪ್ರದೇಶದ ಜಗದಾಂಬಿಕಾ ಪಾಲ್ ಎಂಬವರ ಹೆಸರಿನಲ್ಲಿದೆ. 1998 ಫೆಬ್ರುವರಿ 21 ರಿಂದ ಫೆ. 23ರ ವರೆಗೆ ಅಂದು ಕಾಂಗ್ರೆಸ್‍ನಲ್ಲಿದ್ದ ಜಗದಾಂಬಿಕಾ ಪಾಲ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಕಲ್ಯಾಣ್ ಸಿಂಗ್ ಅವರನ್ನು ಅಲ್ಲಿನ ರಾಜ್ಯಪಾಲರು ಉಚ್ಛಾಟನೆ ಮಾಡಿದಾಗ ಮುಖ್ಯಮಂತ್ರಿ ಪಟ್ಟ ಜಗದಾಂಬಿಕಾ ಪಾಲ್‍ಗೆ ಒಲಿದು ಬಂದಿತ್ತು. ಮೂರನೇ ದಿನ ಅಲಹಾಬಾದ್ ಹೈಕೋರ್ಟ್ ರಾಜ್ಯಪಾಲರ ತೀರ್ಮಾನವನ್ನು ರದ್ದು ಮಾಡಿದಾಗ ಜಗದಾಂಬಿಕಾ ಪಾಲ್ ಅವರ ಮುಖ್ಯಮಂತ್ರಿ ಸ್ಥಾನ ಕೈಜಾರಿತು. ಇದಾದನಂತರ ಪಾಲ್ ಬಿಜೆಪಿಗೆ ಸೇರಿದ್ದರು.

ಇದೀಗ ಜಗದಾಂಬಿಕಾ ಪಾಲ್ ಮತ್ತು ಯಡಿಯೂರಪ್ಪ ಮೂರು ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನವಹಿಸಿದ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿ ಬಿಹಾರದ ಸತೀಶ್ ಪ್ರಸಾದ್ ಶರ್ಮಾ ಇದ್ದಾರೆ, ಇವರು 5 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ನಂತರದ ಸ್ಥಾನದಲ್ಲಿನ ಕೇರಳದ ಸಿ.ಎಚ್. ಮುಹಮ್ಮದ್ ಕೋಯಾ ಇದ್ದಾರೆ. ಇವರು 45 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು

Comments are closed.