ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್ ಡಿ ಕುಮಾರಸ್ವಾಮಿ ಬುಧವಾರ (ಮೇ 23) ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸರ್ವ ರೀತಿಯಲ್ಲೂ ಸಜ್ಜಾಗಿದ್ದಾರೆ. ಇದೀಗ ಅವರಿಗಿಂತಲೂ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ, ಗೂಗಲ್ ಸರ್ಚ್‌ನಲ್ಲಿ ರಾಧಿಕಾ ಹೆಸರು ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ.
ಇಷ್ಟು ದಿನಗಳ ಕಾಲ ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ರಾಜಕಾರಣಿಗಳು ಹೆಸರು ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಇದೀಗ ಗೂಗಲ್ ಸರ್ಚ್‍ನಲ್ಲಿ ನಟಿ, ನಿರ್ಮಾಪಕಿ ರಾಧಿಕಾ ಹೆಸರು ಟ್ರೆಂಡ್ ಆಗಿದೆ. ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗಿನ ಸಂಬಂಧವೇ ಈಗ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಹುಡುಕುವಂತಾಗಿದೆ. Who is Radhika? ಎಂಬುದೇ ಟ್ರೆಂಡ್ ಆಗಿರುವ ಕೀವರ್ಡ್.
2000ದಲ್ಲಿ ಬೆಳ್ಳಿಪರದೆಗೆ ಅಡಿಯಿಟ್ಟ ರಾಧಿಕಾ ಬಳಿಕ ಹಂತಹಂತವಾಗಿ ಚಿತ್ರರಂಗದಲ್ಲಿ ಮೇಲೇರಿದ್ದು ಗೊತ್ತೇ ಇದೆ. ತನ್ನ 16ನೇ ವರ್ಷಕ್ಕೆ ’ನೀಲ ಮೇಘ ಶ್ಯಾಮ’ ಚಿತ್ರದಲ್ಲಿ ಬಣ್ಣ ಹಚ್ಚಿದರು. ಪೂರ್ಣ ಪ್ರಮಾಣದ ನಾಯಕಿಯಾಗಿ ಮೊದಲು ಅಭಿನಯಿಸಿದ ಸಿನಿಮಾ ವಿಜಯ್ ರಾಘವೇಂದ್ರ ಜತೆಗಿನ ’ನಿನಗಾಗಿ’ . 2002ರಲ್ಲಿ ತೆರೆಕಂಡ ಈ ಸಿನಿಮಾ ಆ ವರ್ಷ ಅತ್ಯಧಿಕ ಗಳಿಕೆಯ ಸಿನಿಮಾ ಎನ್ನಿಸಿಕೊಂಡಿತು.
ಅದಾದ ಬಳಿಕ 2003ರಲ್ಲಿ ಐದು ಚಿತ್ರಗಳ ಸತತ ಸೋಲು ಅವರ ವೃತ್ತಿಬದುಕನ್ನು ಪಾತಾಳಕ್ಕೆ ತಳ್ಳಿತು. ಇದೀಗ ಮತ್ತೆ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ನೆಟ್ಟಿಗರು ರಾಧಿಕಾ ಅವರ ಹೆಸರನ್ನು ಸರ್ಚ್ ಮಾಡುತ್ತಿದ್ದಾರೆ. ರಾಧಿಕಾ ಯಾರು (Who is Radhika?) ಎಂದು ಹುಡುಕಾಟ ಆರಂಭಿಸಿದ್ದಾರೆ.
Comments are closed.