ಕರ್ನಾಟಕ

ಪಾಸ್‌ಪೋರ್ಟ್‌ ಸಮಸ್ಯೆ ಬಗೆಹರಿಸಿದ ಸುಷ್ಮಾ ಸ್ವರಾಜ್!

Pinterest LinkedIn Tumblr


ಶಿವಮೊಗ್ಗ: ಇಲ್ಲಿನ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಅರ್ಜಿದಾರರ ಕೋರಿಕೆ ಮೇರೆಗೆ ಸಮಸ್ಯೆ ಬಗೆಹರಿಸಲು ವಿದೇಶಾಂಗ ಸಚಿವರೇ ಮಧ್ಯ ಪ್ರವೇಶಿಸಿರುವ ಘಟನೆ ನಡೆದಿದೆ. ಪ್ರಸ್ತುತ ಜರ್ಮನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ, ಮೂಲತಃ ಶಿವಮೊಗ್ಗದವರಾದ ಅಕ್ಷತಾ ದರ್ಶನ್‌ ಅರ್ಜಿಸಲ್ಲಿಸಿ ತೊಂದರೆಗೆ ಒಳಗಾದವರು. ಎರಡು ತಿಂಗಳ ಹಿಂದೆ ಬಾಣಂತನಕ್ಕೆಂದು ಇಲ್ಲಿಗೆ ಆಗಮಿಸಿದ್ದ ಅವರು, ತಮ್ಮ ಎರಡು ತಿಂಗಳ ಮಗುವಿನೊಂದಿಗೆ ಜರ್ಮನಿಗೆ ತೆರಳಲು ಸಿದ್ಧರಾಗಿದ್ದರು.

ಇದಕ್ಕಾಗಿ ತಮ್ಮ ಮಗುವಿಗೆ ಹೊಸ ಪಾಸ್‌ಪೋರ್ಟ್‌ ಪಡೆಯಲು ಒಂದೂವರೆ ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸ್‌ ಪರಿಶೀಲನೆಗಾಗಿ ಮತ್ತಷ್ಟು ಮಾಹಿತಿ ಕೇಳಲಾಗಿತ್ತು. ನೆರೆಹೊರೆಯವರ ಸಹಿ ಹಾಗೂ ಅವರ ಜತೆ ಇರುವ ಮಗುವಿನ ಭಾವಚಿತ್ರ ಅಗತ್ಯ ಎಂದು ಹೇಳಲಾಗಿತ್ತು. ತ್ವರಿತವಾಗಿ ಪಾಸ್‌ಪೋರ್ಟ್‌ ದೊರಕುವ ಸೌಲಭ್ಯವಿದ್ದೂ ಒಂದೂವರೆ ತಿಂಗಳ ಹಿಂದೆ ಅರ್ಜಿ ಸಲ್ಲಿಸಿಯೂ ಪಾಸ್‌ಪೋರ್ಟ್‌ ದೊರಕದ ಹಿನ್ನೆಲೆಯಲ್ಲಿ ಬೇಸರಗೊಂಡ ಅಕ್ಷತಾ ಭಾನುವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಸರಣಿ ಟ್ವೀಟ್‌ ಮಾಡಿದ್ದಾರೆ. ಎರಡು ತಿಂಗಳ ಮಗುವಿನ ವಿರುದಟಛಿ ಯಾವ ಅಪರಾಧ ಪ್ರಕರಣ ಇರುತ್ತವೆ? ಪೊಲೀಸ್‌ ಪರಿಶೀಲನೆ ಅಗತ್ಯವಿದೆಯೇ? ಪತಿಯ ಹೆಸರು ಸೇರ್ಪಡೆ ಮಾಡಲು ಎಷ್ಟು ಸಮಯ ಕಾಯಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

ಅಕ್ಷತಾ ಅವರ ಟ್ವಿಟ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವೆ ಸುಷ್ಮಾ ಸ್ವರಾಜ್‌ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಅಲ್ಲದೆ ಬೆಂಗಳೂರಿನ ಪ್ರಾದೇಶಿಕ ಕಚೇರಿ ಸಂಪರ್ಕಿಸಿ, ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿದ್ದರು. ಇದೀಗ ಪ್ರಾದೇಶಿಕ ಕಚೇರಿ ಸೂಚನೆ ಮೇಲೆ ಶಿವಮೊಗ್ಗದಲ್ಲಿರುವ ಪಾಸ್‌ಪೋರ್ಟ್‌ ಸೇವಾ ಕಚೇರಿ ಅಕ್ಷತಾ ಅವರ ಸಮಸ್ಯೆ ಬಗೆಹರಿಸಲು ಮುಂದಾಗಿದೆ.

Comments are closed.