ಕರ್ನಾಟಕ

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ಸಾಲಮನ್ನಾ!; ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು : ರೈತರ ಸಾಲಮನ್ನಾ ಮಾಡುತ್ತೇನೆ ಎಂಬ ನನ್ನ ಘೋಷಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಪುನರುಚ್ಛರಿಸಿದ್ದಾರೆ.

ಜೆ.ಪಿ.ನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ ‘ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ಸಾಲಮನ್ನಾ ಮಾಡುತ್ತೇವೆ. ನಾನೊಬ್ಬನೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಈ ಬಗ್ಗೆ ಕಾಂಗ್ರೆಸ್‌ ನಾಯಕರ ಜೊತೆ ಚರ್ಚಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ’ ಎಂದರು.

‘ಇನ್ನೂ ಸಚಿವ ಸ್ಥಾನಗಳ ಹಂಚಿಗೆ ಆಗಿಲ್ಲ, ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಸಮಸ್ಯೆಗಳಿವೆ .ಅವುಗಳನ್ನು ಪರಿಹರಿಸಿಕೊಳ್ಳಬೇಕಿದೆ’ ಎಂದರು.

ದೆಹಲಿಗೆ ತೆರಳುತ್ತಿಲ್ಲ
ರಾಜ್ಯದ ಬೇರೆ, ಬೇರೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದು ನಾನಿಂದು ದೆಹಲಿಗೆ ತೆರಳುತ್ತಿಲ್ಲ ಎಂದು ತಿಳಿಸಿದರು.

ಮನೆ ಒಡೆಯುವುದೇ ಬಿಎಸ್‌ವೈ ಅವರ ಕೆಲಸ

‘ಅವರಿವರ ಮನೆ ಒಡೆಯುವುದು ಬಿಟ್ಟು ಯಡಿಯೂರಪ್ಪ ಅವರಿಗೆ ಬೇರೆ ಕೆಲಸ ಏನಿದೆ? ಮಹಾನ್‌ ನಾನೊಬ್ಬನೇ ದೇಶ ಉದ್ಧಾರ ಮಾಡುವುದು ಅಂತ ತಿಳಿದುಕೊಂಡಿದ್ದಾರೆ. ಇಂತಹ ಆಟಗಳನ್ನು ರಾಜ್ಯದ ಜನ ಬೆಂಬಲಿಸಬಾರದು’ ಎಂದರು.

ಬಿಜೆಪಿ ಬಂದ್‌ ಕರೆ
ಕುಮಾರಸ್ವಾಮಿ ಅವರು ಸಾಲಮನ್ನಾ ಘೋಷಣೆ ಮಾಡದಿದ್ದಲ್ಲಿ ಸೋಮವಾರ ರಾಜ್ಯ ಬಂದ್‌ ಮಾಡಿ ಹೋರಾಟ ಮಾಡುವ ಎಚ್ಚರಿಕೆಯನ್ನು ಬಿಜೆಪಿ ನೀಡಿದೆ.

Comments are closed.