ಕರ್ನಾಟಕ

ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ: ಮಹ್ಮದ್‌ ಈಗ ರಾಜ್ಯಕ್ಕೆ ನಂ.1

Pinterest LinkedIn Tumblr


ಬೆಳಗಾವಿ: ಎಸ್ಸೆಸ್ಸೆಲ್ಸಿ ಇಂಗ್ಲಿಷ್‌ ಮಾಧ್ಯಮದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದ ಬೆಳಗಾವಿಯ ವಿದ್ಯಾರ್ಥಿ ಮಹ್ಮದ್‌ ಕೈಫ್‌ ಮುಲ್ಲಾ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.

ಬೆಳಗಾವಿಯ ಸೇಂಟ್‌ ಕ್ಸೇವಿಯರ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಹ್ಮದ್‌, ವಿಜ್ಞಾನ ವಿಷಯದಲ್ಲಿ 99 ಅಂಕ ಬಂದಿತ್ತು. ಬಳಿಕ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. 41ನೇ ಪ್ರಶ್ನೆಯಲ್ಲಿ ಎರಡು ಅಂಕ ಬರುವಲ್ಲಿ ಒಂದು ಅಂಕ ಮಾತ್ರ ಬಂದಿತ್ತು. ವೀರಭದ್ರೇಶ್ವರ ನಗರ ನಿವಾಸಿಯಾಗಿರುವ ಈ ವಿದ್ಯಾರ್ಥಿ ತಂದೆ ಹಾರೂನ ರಶೀದ್‌ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದು, ತಾಯಿ ಪರ್ವೀನ್‌ ಸರಕಾರಿ ಉರ್ದು ಮಾಧ್ಯಮ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿದ್ದಾರೆ. ಮಹ್ಮದ್‌ ಆಂಗ್ಲ ಮಾಧ್ಯಮದಲ್ಲಿ ಓದಿದ್ದರೂ ಕನ್ನಡದಲ್ಲೂ 100 ಅಂಕ ಗಳಿಸಿದ್ದಾರೆ.

Comments are closed.