ಕರ್ನಾಟಕ

ಚೆನ್ನಪಟ್ಟಣದಲ್ಲಿ ಸೋತ ಬಿಜೆಪಿ ಮಾಜಿ ಶಾಸಕ ಸಿಪಿ ಯೋಗಿಶ್ವರ್ ಮತ್ತೆ ರಾಮನಗರದಲ್ಲಿ ಸ್ಪರ್ಧೆ !

Pinterest LinkedIn Tumblr

ಬೆಂಗಳೂರು: ಚೆನ್ನಪಟ್ಟಣದಲ್ಲಿ ಸೋತ ಮಾಜಿ ಶಾಸಕ ಸಿಪಿ ಯೋಗಿಶ್ವರ್ ಅವರು ಮತ್ತೆ ರಾಮನಗರದಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.

ಚೆನ್ನಪಟ್ಟಣದಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಹಾಗೂ ಹಾಲಿ ಸಿಎಂ ಎಚ್ ಡಿಕುಮಾರ ಸ್ವಾಮಿ ಅವರ ವಿರುದ್ಧ ಹೀನಾಯವಾಗಿ ಸೋತಿದ್ದ ಸಿಪಿ ಯೋಗೀಶ್ವರ್ ಅವರು, ತಮ್ಮ ಬಿಜೆಪಿ ಪಕ್ಷ ಸೂಚಿಸಿದರೆ ಮತ್ತೆ ರಾಮನಗರದಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.

ಚನ್ನಪಟ್ಟಣದ ದೊಡ್ಡಮಳೂರು ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಇಲ್ಲಿನ ಜನರು ನನ್ನ ಅಭಿವೃದ್ಧಿ ಕಾರ್ಯಗಳಿಗಿಂತಲೂ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಎಂಬ ಕಾರಣಕ್ಕೆ ಅವರನ್ನು ಗೆಲ್ಲಿಸಿದ್ದಾರೆ. ಎಚ್ಡಿಕೆ ಕಣ್ಣೀರಿನ ಎದುರು ನನ್ನ ನೀರಾವರಿ ಯೋಜನೆ ಕೊಚ್ಚಿ ಹೋಯಿತು. ಕುಮಾರಸ್ವಾಮಿಯವರು ಈ ಕ್ಷೇತ್ರದ ಅಭಿವೃದ್ಧಿಯನ್ನು ಚೆನ್ನಾಗಿ ಮಾಡಲಿ. ಅವರು ಕೊಟ್ಟಿರುವ ಭರವಸೆಗಳನ್ನೆಲ್ಲ ಜನರಿಗೆ ಪೂರೈಸಲಿ. ನಾವೆಲ್ಲ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.

ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಇಬ್ಬರೂ ನನ್ನ ರಾಜಕೀಯ ವೈರಿಗಳು. ಮುಂದೆಯೂ ಅವರ ವಿರುದ್ಧ ನಾನು ಸ್ಪರ್ಧಿಸುತ್ತೇನೆ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಈ ತಾಲೂಕಿನಲ್ಲೇ ಇರುತ್ತೇನೆ. ಯಾವ ಚುನಾವಣೆಯಲ್ಲೂ ಹಿಂದೆ ಸರಿಯುವುದಿಲ್ಲ. ಪಕ್ಷ ಸೂಚಿಸಿದರೆ ರಾಮನಗರದಿಂದ ಸ್ಪರ್ಧೆಗೆ ತಾವು ಸಿದ್ಧ ಎಂದು ಯೋಗಿಶ್ವರ್ ಹೇಳಿದ್ದಾರೆ.

ರಾಮನಗರ ಮತ್ತು ಚನ್ನಪಟ್ಟಣ 2 ಕ್ಷೇತ್ರದಲ್ಲಿ ಎಚ್ಡಿಕುಮಾರಸ್ವಾಮಿ ಗೆದ್ದಿದ್ದರು. ಆ ಪೈಕಿ ತಮ್ಮ ಭದ್ರ ಕೋಟೆಯಾಗಿರುವ ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಉಪಚುನಾವಣೆ ಎದುರಾಗಿದೆ.

Comments are closed.