ಕರ್ನಾಟಕ

ಪುಟಗೋಸಿ ಮಾನ ಮುಚ್ಚಿಕೊಳ್ಳಲು ಅವಶ್ಯ: ಅನಂತ ಕುಮಾರ ಹೆಗಡೆಗೆ ಕುಮಾರಸ್ವಾಮಿ ತಿರುಗೇಟು

Pinterest LinkedIn Tumblr


ಕುಮಟಾ: ಒಂದು ಕಾಲದಲ್ಲಿ ಜನರು ತಮ್ಮ ಹೃದಯದಲ್ಲಿಟ್ಟು ಪೂಜಿಸುತ್ತಿದ್ದ ಕಾಂಗ್ರೆಸ್‌ ಈಗ ಸೋತು,ಸಣ್ಣ ಪುಟಗೋಸಿ ಪಕ್ಷದೆದುರು ಮಂಡಿಯೂರಿ ದೇಹಿ ಎನ್ನುವ ದೈನೇಸಿ ಸ್ಥಿತಿಗೆ ಬಂದಿದೆ. ಇದಕ್ಕೆ ಕಾರಣ ಕಾಂಗ್ರೆಸ್‌ ನಾಯಕತ್ವ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹೇಳಿದರು.

ಶನಿವಾರ ಮತದಾರರು,ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಇಡೀ ವಿಶ್ವವು ಇಂದು ಭಾರತವನ್ನುಒಪ್ಪಿಕೊಳ್ಳುತ್ತಿದೆ. ಜಗತ್ತಿನಲ್ಲಿ ಭಾರತವು ಬಲಿಷ್ಠವಾಗುತ್ತಿದ್ದು ಸಾರ್ವಭೌಮತ್ವದತ್ತ ಹೆಜ್ಜೆಯಿಡುತ್ತಿದೆ. 120 ಕೋಟಿಗೂ ಹೆಚ್ಚು ಮಕ್ಕಳನ್ನು ಹೊಂದಿರುವ ಭಾರತ ಮಾತೆ ತನ್ನ ಮಕ್ಕಳನ್ನು ಸ್ವಾವಲಂಬಿಯಾಗಿ ಬೆಳೆಸಬೇಕೇ ಹೊರತು, ಸಬ್ಸಿಡಿಗಳಿಂದ, ರೊಟ್ಟಿ ಬಿಸಾಕುವುದರಿಂದ, ತುಷ್ಠಿàಕರಣ ನೀತಿಯಿಂದ ಮುನ್ನಡೆಸಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಈಗೀಗ ಗೆಲುವು ಕಾಣುತ್ತಿದೆ. 70 ವರ್ಷ ದೇಶವನ್ನು ಲೂಟಿ ಮಾಡಿದ ಕಾಂಗ್ರೆಸ್‌ ಇಷ್ಟು ದಿನ ಆಡಳಿತ ಮಾಡಿರುವಾಗ ಈ ಮಣ್ಣನ್ನು ಪ್ರೀತಿ ಮಾಡುವ ಬಿಜೆಪಿ ಇನ್ನು ಎಷ್ಟು ವರ್ಷ ಆಡಳಿತ ಮಾಡಬೇಕು ಎಂಬುದನ್ನು ನಿರ್ಧರಿಸಿ. ನಮ್ಮ ಈ ವಿಜಯದ ಧ್ವನಿ ಕುಗ್ಗಬಾರದು. ಯುದ್ಧ ಇನ್ನೂ ಮುಂದಿದೆ. ಎಲ್ಲಿ ತನಕ ನಮ್ಮ ದೇಶದ ಮೇಲೆ ನಮ್ಮ ಧರ್ಮದ ಧ್ವಜ ಹಾರೋದಿಲ್ಲವೋ ಅಲ್ಲಿವರೆಗೆ ಈ ಹೋರಾಟ ಮುಗಿಯುವುದಿಲ್ಲ ಎಂದರು.

ಮಾನ ಮುಚ್ಚಿಕೊಳ್ಳಲು ಪುಟಗೋಸಿ ಅಗತ್ಯ
ಬೆಂಗಳೂರು: ಮನುಷ್ಯನ ಮಾನ ಮುಚ್ಚಿಕೊಳ್ಳಲು ಪುಟಗೋಸಿ ಅಗತ್ಯ. ಶ್ರೀಮಂತನಾದರೂ, ಬಡವನಾದರೂ ಅದು ಅಗತ್ಯ. ಇಲ್ಲದಿದ್ದರೆ ಮರ್ಯಾದೆ ಇರುವುದಿಲ್ಲ. ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು ಜೆಡಿಎಸ್‌ ಬಗ್ಗೆ ಪುಟಗೋಸಿ ಪದ ಬಳಸಿರುವುದು ಅವರ ಸಂಸ್ಕೃತಿ ತೋರುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Comments are closed.