ಕರ್ನಾಟಕ

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗಿಂತಲೂ ದೇವೇಗೌಡರು ಉತ್ತಮ: ಶಿವಸೇನೆ

Pinterest LinkedIn Tumblr


ಎನ್‌ಡಿಎ ಮೈತ್ರಿಕೂಟದಲ್ಲಿದ್ದರೂ ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಶಿವಸೇನೆ ಹಳೆಯ ಮಿತ್ರಪಕ್ಷವನ್ನು ಮೂದಲಿಸಲು ತುದಿಗಾಲ ಮೇಲೆಯೇ ನಿಮತಿರುತ್ತದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗಿಂತ ಜೆಡಿಎಸ್ ವರಿಷ್ಠ, ಜ್ಯಾತ್ಯಾತೀತ ನಾಯಕ ಎಚ್ ಡಿ ದೇವೇಗೌಡ ಉತ್ತಮ ಎಂದು ಶಿವಸೇನೆ ಹೇಳಿದೆ.

ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕರೂ ಕೂಡ ಆಗಿರುವ ಶಿವಸೇನೆ ಸಂಸದ ಸಂಜಯ್ ರಾವತ್ ತಮ್ಮ ಲೇಖನದಲ್ಲಿ ಶಿವಸೇನೆ ಬಿಜೆಪಿಯ ಅತೀ ದೊಡ್ಡ ಎದುರಾಳಿ ಎಂದು ಹೇಳಿದ್ದಾರೆ.

ಅಲ್ಲದೆ ಈ ದೇಶಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಜುಗಲ್‌ಬಂದಿ ಬೇಕಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಗಿಂತ ‘ಜ್ಯಾತ್ಯಾತೀತ’ ಹೆಚ್ ಡಿ ದೇವೇಗೌಡ ಉತ್ತಮ ಎಂದು ಅವರು ಹೇಳಿದ್ದಾರೆ.

ಶಿವಸೇನೆಯ ಹಿಂದುತ್ವವಾದ ಬಿಜೆಪಿಗೆ ತಿರುಗುಬಾಣವಾಗಲಿದೆ. ಪಾಲ್ಗಾರ್‌ನಲ್ಲಿ ಬಿಜೆಪಿ ಶಿವಸೇನೆ ಎದುರಾಳಿಯಾಗಿತ್ತು. ಇವಿಎಂಗಳ ದುರ್ಬಳಕೆ ಮೂಲಕ ಪಾಲ್ಗಾರ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ರಾವತ್ ಆರೋಪಿಸಿದ್ದಾರೆ.

ಪಾಲ್ಗಾರ್ ನಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ ಉಳಿದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಇದು ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಉಪ ಚುನಾವಣಾ ಫಲಿತಾಂಶಗಳು ದೇಶದಲ್ಲಿ ಬಿಜೆಪಿಯ ಪತನದ ಪ್ರತೀಕವಾಗಿದೆ ಎಂದಿದೆ.

Comments are closed.