ಕರ್ನಾಟಕ

ಗಂಡನನ್ನು ಕೊಲೆ ಮಾಡಿ ಸಹಜ ಸಾವು ಎಂದಿದ್ದ ಮಹಿಳೆಯ ಬಂಧನ

Pinterest LinkedIn Tumblr


ಹುಬ್ಬಳ್ಳಿ: ಪತಿಯನ್ನು ಕೊಂದು ಸಹಜ ಸಾವು ಎಂದು ನಾಟಕವಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾವ್ಯ ಹಳೆಮನಿ(40) ಬಂಧಿತ ಮಹಿಳೆ. ಮೇ 2ರಂದು ಶಿವಯೋಗಿ ಹಳೆಮನೆ (45) ಎಂಬುವರು ಮೃತಪಟ್ಟಿದ್ದರು. ಓಂ ನಗರದ ನಿವಾಸದಲ್ಲಿ ತಲೆಗೆ ಗಾಯವಾಗಿ ಸಾವನ್ನಪ್ಪಿದ್ದರು. ಮಂಚದ ಮೇಲಿಂದ ಬಿದ್ದು ಗಾಯವಾಗಿ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಕಥೆ ಕಟ್ಟಿದ್ದಳು. ಆದರೆ ಮೃತ ಶಿವಯೋಗಿ ಸಂಬಂಧಿಗಳು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಸಂಶಯಾಸ್ಪದ ಸಾವು ಎಂದು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿಯಿಂದ ಗೊತ್ತಾಗಿತ್ತು. ನಂತರ ಪೊಲೀಸರು ಕಾವ್ಯಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕೌಟುಂಬಿಕ ಕಲಹದ ಕಾರಣ ಬ್ಯಾಟ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಕಾವ್ಯ ಒಪ್ಪಿಕೊಂಡಿದ್ದಾಳೆ. ಪೊಲೀಸರು ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Comments are closed.