ಬೆಂಗಳೂರು: ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಪಟ್ಟಿಯನ್ನು ರಾಜ್ಯಪಾಲರ ಅನುಮೋದನೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ನಾನು ಮಧ್ಯಾಹ್ನವೇ ಖಾತೆ ಹಂಚಿಕೆ ಪಟ್ಟಿಯನ್ನು ಫೈನಲ್ ಮಾಡಿ ರಾಜ್ಯಪಾಲರಿಗೆ ಕಳುಹಿಸಿದ್ದೇನೆ, ಅಲ್ಲಿಂದ ಗಜೆಟ್ ನೋಟಿಫಿಕೇಷನ್ ಆಗಿ ಬರಬೇಕಾಗಿದೆ ಎಂದರು.
ಡಿಕೆಶಿ, ರೇವಣ್ಣ ಇಬ್ಬರಿಗೂ ಇಲ್ಲ ಇಂಧನ ಖಾತೆ?
ಇಂಧನ ಖಾತೆಗಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗೂ ಎಚ್ ಡಿ ರೇವಣ್ಣ ನಡುವೆ ಭಾರೀ ಪೈಪೋಟಿ ನಡೆದಿತ್ತು. ಏತನ್ಮಧ್ಯೆ ಶಾಸಕರು ಸಚಿವರಿಗೆ ಪ್ರಮಾಣವಚನ ಸ್ವೀಕರಿಸಿದ್ದರೆ ವಿನಃ ಖಾತೆ ಹಂಚಿಕೆ ಆಗಿಲ್ಲವಾಗಿತ್ತು.
ಇದೀಗ ಡಿಕೆಶಿ ಹಾಗೂ ರೇವಣ್ಣಗೆ ಇಂಧನ ಖಾತೆ ಕೊಡದೆ ತಮ್ಮ ಬಳಿಯೇ ಇಂಧನ ಖಾತೆ ಇಟ್ಟುಕೊಳ್ಳಲು ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆನ್ನಲಾಗಿದೆ.
Comments are closed.