ಯಾದಗಿರಿ: ಶಹಾಪುರ ತಾಲೂಕಿನ ದರಿಯಾಪುರದ ಜಮೀನೊಂದರಲ್ಲಿ ಭೂಮಿ ಹಠಾತ್ತನೆ ಭೂಮಿ ಬಾಯಿ ತೆರೆದಿದ್ದು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಗ್ರಾಮದ ಸೋಮಣ್ಣ ದರಿಯಾಪುರ ಎಂಬುವರ ಜಮೀನಿನಲ್ಲಿ ಬುಧವಾರ ಈ ಕಂದಕ ಕಂಡು ಬಂದಿದೆ. ಅಂದಾಜು 4 ಅಡಿ ಅಗಲ, 10 ಅಡಿ ಆಳದಷ್ಟು ಕಂದಕ ಸೃಷ್ಟಿಯಾಗಿದ್ದು, ಜನ ಆಶ್ಚರ್ಯ ಚಕಿತರಾಗಿದ್ದಾರೆ.
ಕಂದಕದೊಳಗೆ ದೊಡ್ಡ ಸುರಂಗ ಕಂಡು ಬರುತ್ತಿದೆ ಎಂದು ಒಂದಷ್ಟು ಮಂದಿ ಹೇಳಿದರೆ, ಅಮಾವಾಸ್ಯೆ ಇರುವುದರಿಂದ ನಿಧಿಗಳ್ಳರು ಹೀಗೆ ಮಾಡಿದ್ದಾರೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಉಪ ತಹಸೀಲ್ದಾರ ವೆಂಕಣ್ಣಗೌಡ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಕದೊಳಗೆ ಇಳಿದು ಮಣ್ಣು ಪರೀಕ್ಷೆ ಮಾಡಿದ್ದಾರೆ. ಇದು ಕೃತಕ ಸೃಷ್ಟಿಯೋ, ನೈಸರ್ಗಿಕವಾಗಿಯೇ ಆದದ್ದೋ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
Comments are closed.