ಕರ್ನಾಟಕ

ಮಹಿಳೆಗೆ ಗರ್ಭಿಣಿ ಎಂದು ಹೆರಿಗೆಯ ದಿನಾಂಕವನ್ನು ಫಿಕ್ಸ್ ಮಾಡಿ ವಂಚಿಸಿದ ವೈದ್ಯೆ!

Pinterest LinkedIn Tumblr


ಮೈಸೂರು: ಗರ್ಭಿಣಿ ಎಂದು ಸುಳ್ಳು ಹೇಳಿ ಮಹಿಳೆಯಿಂದ ಸಾವಿರಾರು ರೂ. ವಸೂಲಿ ಮಾಡಿರುವ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.

ಕೃಷ್ಣಾ ಕ್ಲಿನಿಕ್​ನ ಡಾ.ಗೀತಾ ವಿರುದ್ಧ ಪ್ರೇಮಾ ಎಂಬ ಮಹಿಳೆ ನಂಜನಗೂಡು ಪಟ್ಟಣ ಪೊಲೀಸ್​ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ. ಒಂದು ವೇಳೆ ನನ್ನ ಪ್ರಾಣಕ್ಕೇನಾದರೂ ಆದರೆ ಅದಕ್ಕೆ ಡಾ.ಗೀತಾ ಅವರೇ ಕಾರಣ ಎಂದು ಲಿಖಿತ ದೂರು ನೀಡಿದ್ದಾರೆ.

ಏನಿದು ಘಟನೆ?
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೆರಟಹಳ್ಳಿಯ ಪ್ರೇಮಾ 2 ವರ್ಷದ ಹಿಂದೆ ಪ್ರಕಾಶ್ ಎಂಬುವರನ್ನು ವಿವಾಹವಾಗಿದ್ದರು. ಎರಡು ವರ್ಷದಿಂದ ಮಕ್ಕಳಾಗಿಲ್ಲ ಎಂದು ಕೃಷ್ಣಾ ಆಸ್ಪತ್ರೆಗೆ ತೆರಳಿದಾಗ ಪ್ರೇಮಾ ಗರ್ಭಿಣಿ ಎಂಬುದನ್ನು ವೈದ್ಯರು ತಿಳಿಸಿದ್ದಾರೆ.

ಪ್ರೇಮಾ ಅವರಿಗೆ ಮಗುವಾಗುವ ಸಂಭ್ರಮದಲ್ಲಿ ತಾಯಿಯ ಮನೆಯಲ್ಲಿ ಸೀಮಂತವನ್ನೂ ಮಾಡಿದ್ದಾರೆ. ನಿನ್ನೆ (ಗುರುವಾರ) ಹೆರಿಗೆಯಾಗುವುದಾಗಿ ವೈದ್ಯರು ದಿನಾಂಕ ಖಚಿತಪಡಿಸಿದ್ದರಿಂದ ಪ್ರೇಮಾ ಅವರು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅಲ್ಲಿ ಪ್ರೇಮಾ ಗರ್ಭಿಣಿಯೇ ಅಲ್ಲ ಎಂಬ ವಿಚಾರ ತಿಳಿದು ಬಂದಿದೆ. ಬದಲಾಗಿದೆ ಅವರ ಹೊಟ್ಟೆಯಲ್ಲಿ ಗಂಟು ಇರುವುದನ್ನು ವೈದ್ಯರು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಕೃಷ್ಣಾ ಕ್ಲಿನಿಕ್​ಗೆ ಹೋಗಿ ಪ್ರಶ್ನಿಸಿದಾಗ ಚಿಕಿತ್ಸೆ ನೀಡಿದ್ದ ಚೀಟಿಗಳನ್ನು ಕಸಿದುಕೊಂಡು ನೀವು ಯಾರು ಎಂದು ನನಗೆ ಗೊತ್ತೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

Comments are closed.