ಬೆಂಗಳೂರು: ಎರಡನೇ ಮದುವೆಗಾಗಿ ಮಹಿಳೆಯೊಬ್ಬಳು ಪತಿ ಬದುಕಿರುವಾಗಲೇ ಆತನ ಡೆತ್ ಸರ್ಟಿಫಿಕೇಟ್ (ಮರಣ ಧೃಢೀಕರಣ ಪ್ರಮಾಣಪತ್ರ) ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಡೆತ್ ಸರ್ಟಿಫಿಕೇಟ್ ಇಟ್ಟುಕೊಂಡು ಬ್ಯಾಂಕ್ ಅಧಿಕಾರಿ ನಾಗರಾಜ್ ಎಂಬುವವರನ್ನು ಎರಡನೇ ಮದುವೆಯಾಗಿದ್ದು, ಸತ್ಯ ತಿಳಿದ ನಂತರ ಮಹಿಳೆಯ ಎರಡನೇ ಪತಿ ನಾಗರಾಜ್ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಮೊದಲನೇ ಗಂಡ ಬದುಕಿರುವಾಗಲೇ ಸುಳ್ಳು ಪ್ರಮಾಣಪತ್ರ ನೀಡಿ ನನ್ನನ್ನು ಮದುವೆಯಾಗಿದ್ದಾಳೆ. ಜತೆಗೆ ನನ್ನ ಆಸ್ತಿದೋಚಲು ಈ ಕೃತ್ಯ ಎಸಗಿದ್ದಾಳೆ ಎಂದು ಬ್ಯಾಂಕ್ ಉದ್ಯೋಗಿ ನಾಗರಾಜ್ ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಇತ್ತೀಚೆಗೆ ನಾಗರಾಜ್ ಎಂಬುವವರ ಪತ್ನಿ ಮೃತಪಟ್ಟಿದ್ದರಿಂದ ಅವರು ಮತ್ತೊಂದು ಮದುವೆಯಾಗಲು ಮುಂದಾದಾಗ, ಚಿಕ್ಕಬಳ್ಳಾಪುರ ಮೂಲದ ವೆಂಕಟಲಕ್ಷ್ಮೀ ಎಂಬುವವರ ಪರಿಚಯವಾಗಿದೆ. ನಂತರ ಇಬ್ಬರೂ ಮದುವೆಯಾಗಿದ್ದಾರೆ.
ಆದರೆ ವೆಂಕಟಲಕ್ಷ್ಮಿ ನಾಗರಾಜ್ ಅವರನ್ನು ಮದುವೆಯಾಗುವ ಮುಂಚೆ ನನ್ನ ಪತಿ 1990ರಲ್ಲೇ ಮೃತಪಟ್ಟಿರುವುದಾಗಿ ಸುಳ್ಳು ಡೆತ್ ಸರ್ಟಿಫಿಕೇಟ್ ಮಾಡಿಸಿ ತೋರಿಸಿದ್ದಾರೆ.
ಮದುವೆಯಾದ ಬಳಿಕ ವೆಂಕಟಲಕ್ಷ್ಮಮ್ಮ ನಾಗರಾಜ್ ಅವರು ಕಟ್ಟಿದ್ದ ಚಿನ್ನದ ತಾಳಿ ಸೇರಿ ಇತರೆ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾರೆ. ಅನುಮಾನಗೊಂಡ ನಾಗರಾಜ್ ಚಿಕ್ಕಬಳ್ಳಾಪುರ ತಹಶಿಲ್ದಾರ್ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವೆಂಕಟಲಕ್ಷ್ಮಳ ಮೊದಲ ಪತಿ ಬದುಕಿರುವುದು ಬೆಳಕಿಗೆ ಬಂದಿದೆ
Comments are closed.