ಕರ್ನಾಟಕ

ಮುಖ್ಯಮಂತ್ರಿ ಹೊಸ ಬಜೆಟ್‌ ಮಂಡಿಸುವ ಅಗತ್ಯ ಇಲ್ಲ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೊಸ ಬಜೆಟ್‌ ಮಂಡಿಸಬೇಕಾಗಿಲ್ಲ ಎಂದು ಮಾಜಿ ಸಿಎಂ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ.

ನಮ್ಮ ಬಜೆಟ್‌ನ ಜಾರಿಯಲ್ಲಿರುವ ಎಲ್ಲಾ ಕಾರ್ಯಕ್ರಮಗಳು ಈ ಸರ್ಕಾರದಲ್ಲೂ ಮುಂದುವರಿಯಲಿದ್ದು, ಕುಮಾರಸ್ವಾಮಿ ಅವರು ಹೊಸ ಕಾರ್ಯಕ್ರಮ ಸೇರಿಸುವುದಾದರೆ ಸೇರಿಸಲಿ. ಅದಕ್ಕೆ ಹೊಸ ಬಜೆಟ್‌ ಮಂಡಿಸಬೇಕೆಂದಿಲ್ಲ.ಪೂರಕ ಬಜೆಟ್‌ನಲ್ಲಿ ಘೋಷಿಸಬಹುದು ಎಂದರು.

ಕೆಪಿಸಿಸಿ ಅಧ್ಯಕ್ಷ ನಾಗಲು ನನಗೆ ಆಸಕ್ತಿ ಇಲ್ಲ .ನನ್ನ ಸರ್ಕಾರ ತಿರಸ್ಕರಿಸಿದ್ದಾರೆ ಜನರು ಕೊಟ್ಟ ತೀರ್ಪು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು. ಯಾಕೆ ಎಂದು ಪ್ರತಕರ್ತರೊಬ್ಬರು ಪ್ರಶ್ನಿಸಿದಾಗ ಒಬ್ನೆ ಬಾ ಹೇಳ್‌ತೀನಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ರೈತರ ಸಾಲ ಮನ್ನಾಗೆ ಬೆಂಬಲ ನಮ್ಮ ಬೆಂಬಲ ಇದೆ. ನಾನು ಸಾಲ ಮನ್ನಾದ ಪರವಾಗಿ ಇದ್ದೇನೆ ಎಂದರು.

ರಾಷ್ಟ್ರಪತಿಗಳಿಗೆ ಧನ್ಯವಾದ

ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯ ಸರ್ಕಾರಿ ನೌಕರರ ಜ್ಯೇಷ್ಠತೆ ವಿಸ್ತರಿಸುವ ವಿಧೇಯಕ- 2017’ಕ್ಕೆ ಅಂಕಿತ ಹಾಕಿರುವುದಕ್ಕೆ ರಾಷ್ಟ್ರಪತಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಈ ಬೆಳವಣಿ ಗೆ ಯಿಂದಾಗಿ ಸುಪ್ರೀಂ ತೀರ್ಪಿನ ನ್ವಯ ಹಿಂಬ ಡ್ತಿಯ ಆತಂಕ ಹೊಂದಿದ್ದ ಸಾವಿರಾರು ನೌಕರರಿಗೆ ನ್ಯಾಯ ದೊರಕಿದೆ ಎಂದರು.

Comments are closed.