ಕರ್ನಾಟಕ

ಡಿ.ಕೆ.ಶಿವಕುಮಾರ್‌ಗೆ ಹವಾಲ ವ್ಯವಹಾರದ ಉರುಳು?

Pinterest LinkedIn Tumblr


ಬೆಂಗಳೂರು: ಐಟಿ ದಾಳಿ ಪ್ರಕರಣದ ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಮತ್ತೊಂದು ದೂರು ನೀಡಿದ್ದು, ದೂರಿನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಸಚಿವ ಡಿಕೆಶಿ ಹವಾಲ ವ್ಯವಹಾರದಲ್ಲೂ ಭಾಗಿಯಾಗಿರುವ ಆರೋಪ ಎದುರಾಗಿದ್ದು, ಹೈಕಮಾಂಡ್‌ಗೆ ಕೋಟ್ಯಂತರ ಹಣ ಪಾವತಿಸಿದ್ದಾರೆ ಎನ್ನಲಾಗುತ್ತಿದೆ.

ಶರ್ಮಾ ಟ್ರಾನ್ಸ್​ಪೋರ್ಟ್​​ ವ್ಯವಹಾರ ನೋಡಿಕೊಳ್ಳುತ್ತಿದ್ದ ರಾಜೇಂದ್ರ ಎಂಬವರ ಮೂಲಕ ಪಕ್ಷದ ಹೈಕಮಾಂಡ್​​ಗೆ ಹಣ ರವಾನಿಸಿದ್ದಾರೆ ಎನ್ನಲಾಗಿದ್ದು, ರಾಜೇಂದ್ರ ಮನೆ ಮೇಲೆ ಐಟಿ ದಾಳಿ ಮಾಡಿದಾಗ ಸತ್ಯ ಬಯಲಾಗಿದೆ. ರಾಜೇಂದ್ರ ಮನೆಯಲ್ಲಿ ಸಿಕ್ಕ ಡೈರಿ ಮತ್ತು ಟಿಪ್ಪಣಿಗಳಲ್ಲಿ ‘KG’ ಎಂಬ ಕೋಡ್‌ ಪತ್ತೆಯಾಗಿದ್ದು, ಲಕ್ಷಗಳನ್ನು ಡೈರಿಯಲ್ಲಿ ‘KG’ ಲೆಕ್ಕದಲ್ಲಿ ನಮೂದಿಸಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

ಎಐಸಿಸಿಗೆ ಕೊಡುವಂತೆ ವಿ.ಮುಳ್‌ಗುಂದ್‌ಗೆ 5 ಕೋಟಿ ರೂ.ಗಳನ್ನು ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ರಾಜೇಂದ್ರ ರವಾನಿಸಿದ್ದರಂತೆ. ಶರ್ಮಾ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಮನೆಯನ್ನು ಡಿಕೆಶಿ ಹಣ ಇಡಲು ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಸಫ್ದರ್ ಜಂಗ್‌ನ 3 ಫ್ಲ್ಯಾಟ್‌ಗಳನ್ನು ಅಘೋಷಿತ ಹಣ ಸಂಗ್ರಹಣೆಗೆ ಬಳಸಿಕೊಳ್ಳುತ್ತಿದ್ದ ಬಗ್ಗೆ ಐಟಿ ಇಲಾಖೆ ಉಲ್ಲೇಖಿಸಿದೆ.

Comments are closed.