0
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಹೊಸ ಸಂಕಷ್ಟ ತಂದಿದೆ. ಸರಕಾರ ರಚನೆಗೂ ಮುನ್ನ ನಡೆದ ನಾಟಕೀಯ ಬೆಳವಣಿಗೆಗಳು, ನಂತರ ನಡೆದ ಖಾತೆ ಹಂಚಿಕೆ ಜಟಾಪಟಿ, ಅವಕಾಶ ವಂಚಿತರ ಆಕ್ರೋಶ ಒಂದಷ್ಟು ತಣ್ಣಗಾಯಿತು ಎಂದು ಕೊಳ್ಳುತ್ತಿರುವಾಗಲೇ ಹೊಸ ತಲೆನೋವು ಉಂಟಾಗಿದೆ. ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ ಬರಲಿಲ್ಲ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೂ ಸಾಬೀತುಪಡಿಸಲು ಮುಂದಾಗಲಿಲ್ಲ.
ಆಗ ಕಾಂಗ್ರೆಸ್, ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಿ ಸರಕಾರ ರಚನೆಗೆ ಮುಂದಾಯಿತು. ಉಭಯ ಪಕ್ಷಗಳಲ್ಲೂ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿದ್ದರು. ಅದರಲ್ಲೂ ಕಾಂಗ್ರೆಸ್ ನಲ್ಲಂತೂ ಮಾಜಿ ಸಚಿವರ ದಂಡೇ ಇತ್ತು. ಅಳೆದೂ ತೂಗಿ ಮೊದಲ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಾಯಿತಾದರೂ ಅಸಮಾಧಾನ ಸ್ಫೋಟಗೊಂಡಿತು. ಇದು ಒಂದು ಹಂತಕ್ಕೆ ಬಂತು ಎನ್ನುವಾಗಲೇ ಪ್ರಮುಖ ಖಾತೆ ಹಂಚಿಕೆಗೆ ಹಗ್ಗಜಗ್ಗಾಟ ನಡೆಯಿತು. ಖಾತೆ ಹಂಚಿಕೆ ನಂತರ ಸಮೃದ್ಧ ಇಲಾಖೆ ಸಿಗಲಿಲ್ಲ ಕೆಲ ಸಚಿವರು ಮುನಿಸಿಕೊಂಡು ವಾರವಾದರೂ ವಿಧಾನಸೌಧದತ್ತ ತಲೆ ಹಾಕಿ ಮಲಗಲಿಲ್ಲ. ಇನ್ನೇನು ಎಲ್ಲವೂ ಸರಿಹೋಯಿತು ಎನ್ನುವಾಗ ಶಿವಕುಮಾರ್ ಪ್ರಕರಣ ಮುಜುಗರ ಉಂಟುಮಾಡಿದೆ.
Comments are closed.