ಕರ್ನಾಟಕ

ಗೌರಿ ಹಂತಕರು ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದ ಹಂತಕರ ಹೆಡೆಮುರಿ ಕಟ್ಟುವಲ್ಲಿ ಎಸ್​ಐಟಿ ಯಶಸ್ವಿಯಾಗಿದೆ. ರಾತ್ರೋರಾತ್ರಿ ಗುಂಡಿಕ್ಕಿ ಪರಾರಿಯಾಗಿದ್ದ ಹಂತಕರು ಬಲೆಗೆ ಬಿದ್ದದ್ದು ಹೇಗೆ ಎಂಬ ಕುತೂಹಲಕಾರಿ ಮಾಹಿತಿ ಇದೀಗ ಹೊರಬಿದ್ದಿದೆ. ಹಂತಕರು ಕರ್ನಾಟಕ ಪೊಲೀಸರನ್ನ ಕಡೆಗಣಿಸಿದ್ಧೆ ಅವರಿಗೆ ಮುಳುವಾಯ್ತು ಎನ್ನುತ್ತಿವೆ ವರದಿಗಳು.

ಗೌರಿ ಲಂಕೇಶ್ ಹತ್ಯೆ ಮಾಡಿದ್ದ ಆರೋಪಿಗಳು ನಮ್ಮನ್ನ ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಿಲ್ಲ ಎಂದು ಊಹಿಸಿದ್ದರು. ಇದೇ ಕಾರಣಕ್ಕೆ ಭಗವಾನ್ ಹತ್ಯೆಗೂ ಸಂಚು ರೂಪಿಸಿದ್ದರು. ಇದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಇಬ್ಬರು ವಿಚಾರವಾದಿಗಳ ಹತ್ಯೆಯಾಗಿತ್ತು. ಅಲ್ಲಿನ ಸರ್ಕಾರ ಎಸ್ಐಟಿ ಮತ್ತು ಸಿಬಿಐ ತನಿಖೆಗೆ ಅದೇಶಿಸಿತ್ತು. ಸಿಬಿಐ ತನಿಖೆ ಮಾಡಿದರೂ ಹಂತಕರನ್ನ ಪತ್ತೆ ಹಚ್ಚುವಲ್ಲಿ ಸಾಧ್ಯವಾಗಿರಲಿಲ್ಲ. ಹೀಗಾಗಿ, ಸಿಬಿಐನಿಂದ ಆಗದ್ದು ರಾಜ್ಯ ಪೊಲೀಸರಿಂದ ಏನ್ ಅಗುತ್ತೆ ಎಂದು ತೀರ್ಮಾನಿಸಿದ್ದ ಹಂತಕರು ಭಗವಾನ್ ಹತ್ಯೆಗೂ ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಸಂಶೋಧಕ ಎಂ.ಎ| ಕಲಬುರ್ಗಿ ಹತ್ಯೆ ಕೇಸ್ ನಲ್ಲೂ ಸಿಐಡಿ‌ ತನಿಖೆ ನಡೆಸಲಾಗಿತ್ತು. ಸತತ ತನಿಖೆ ನಡೆಸಿ ಆರೋಪಿಗಳು ಸಿಗದೆ ಸಿಐಡಿ ಪೊಲೀಸರು ಕೈಚೆಲ್ಲಿದ್ದರು. ಹೀಗೆ ಮೂರು ಚಿಂತಕರ ಹತ್ಯೆ ಕೇಸ್​ಗಳ ತನಿಖೆಗಳಲ್ಲಿ ಪೊಲೀಸರು ಹಿನ್ನಡೆ ಅನುಭವಿಸಿದ್ದರು. ಹೀಗಿರುವಾಗ ಗೌರಿ ಹತ್ಯೆ ತನಿಖೆಗೆ ರಚನೆಯಾದ ಎಸ್ಐಟಿ ಏನ್ ಮಾಡುತ್ತದೆ ಎಂದು ಕಡೆಗಣಿಸಿದ್ದ ಹಂತಕರು ಮತ್ತಷ್ಟು ದುಷ್ಕೃತ್ಯಕ್ಕೆ ಯೋಜನೆ ರೂಪಿಸಿದ್ದರು.

ಪ್ರೊ ಭಗವಾನ್ ಹತ್ಯೆಗೆ ಸ್ಕೇಚ್: ಗೌರಿ ಲಂಕೇಶ್ ಹತ್ಯೆಯ ಬೆನ್ನಲ್ಲೇ ಭಗವಾನ್ ಹತ್ಯೆ ಮಾಡಲು ಹಂತಕರು ಸಿದ್ದತೆ ನಡೆಸಿದ್ದರು. ಭಗವಾನ್ ಹತ್ಯೆಗೆ ಪಿಸ್ತೂಲ್ ಸಾಗಾಟ ಮಾಡುವ ವೇಳೆ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ನವೀನ್ ಬಂಧನದ ಬಳಿಕ ಇಡೀ ಹಂತಕರ ತಂಡ ಎಸ್ಐಟಿ ಬಲೆಗೆ ಬಿದ್ದಿತ್ತು.

Comments are closed.