ಕರ್ನಾಟಕ

ಮಹಾಲಕ್ಷ್ಮೀ ಹಬ್ಬಕ್ಕೆ 4,500ರೂ.ಗೆ ಮೈಸೂರು ಸಿಲ್ಕ್ ಸೀರೆ ನೀಡಲು ಸರ್ಕಾರ ಚಿಂತನೆ

Pinterest LinkedIn Tumblr


ಮೈಸೂರು: ಮಧ್ಯಮ ವರ್ಗದ ಮಹಿಳೆಯರೂ ಮೈಸೂರು ರೇಷ್ಮೆ ಸೀರೆ ಉಡುವಂತಾಗಬೇಕೆಂಬ ದೃಷ್ಟಿಯಿಂದ ವರ ಮಹಾಲಕ್ಷ್ಮೀ ಹಬ್ಬಕ್ಕೆ 4,500ರೂ.ಗೆ ಮೈಸೂರು ರೇಷ್ಮೆ ಸೀರೆ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ಮೈಸೂರು ರೇಷ್ಮೆ
ಸೀರೆಗಳ ತಯಾರಿ ನಡೆದಿದೆ. ಬೇಡಿಕೆ ಎಷ್ಟೇ ಬಂದರೂ ಪೂರೈಸಲು ಸಿದ್ಧವಾಗಿದ್ದೇವೆ ಎಂದು ಹೇಳಿದರು.

ವರ್ಷದ ಹಿಂದೆ ಕೆಎಸ್‌ಐಸಿ ಅಧ್ಯಕ್ಷರಾಗಿದ್ದ ಬಿ.ಬಸವರಾಜು 5 ಸಾವಿರ ರೂ.ಗಳಿಗೆ ಮೈಸೂರು ರೇಷ್ಮೆ ಸೀರೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಈಡೇರಿರಲಿಲ್ಲ. ಇದೀಗ 4,500 ರೂ.ಗಳಿಗೆ ರೇಷ್ಮೆ ಸೀರೆ ನೀಡಲು
ನಿರ್ಧರಿಸಿದ್ದೇವೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ಸೀರೆಗಳ ನೇಯ್ಗೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಬೇರೆಲ್ಲೂ ಮಾರಾಟಕ್ಕೆ ಅವಕಾಶವಿಲ್ಲ: ಮೈಸೂರು ರೇಷ್ಮೆಗೆ ಪೇಟೆಂಟ್‌ ಇರುವುದರಿಂದ ಕೆಎಸ್‌ಐಸಿ ಮಾರಾಟ
ಮಳಿಗೆಗಳನ್ನು ಬಿಟ್ಟರೆ, ಬೇರೆಲ್ಲೂ ಮೈಸೂರು ರೇಷ್ಮೆ ಸೀರೆ ಮಾರಾಟಕ್ಕೆ ಅವಕಾಶವಿಲ್ಲ. ಖಾಸಗಿ ಮಾರಾಟ ಮಳಿಗೆಗಳಲ್ಲಿ ಮೈಸೂರು ರೇಷ್ಮೆ ಸೀರೆ ಹೆಸರಿನಲ್ಲಿ ಸೀರೆಗಳ ಮಾರಾಟ ಮಾಡುತ್ತಿದ್ದರೆ ಅವರ ವಿರುದಟಛಿ ಕ್ರಮ
ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Comments are closed.